ಎಷ್ಟೇ ಪ್ರಮಾಣದಲ್ಲಿ ಮದ್ಯ ಸೇವಿಸಿದರೂ ಅದು ಅಂಗಾಂಗಗಳ ಮೇಲೆ ಪರಿಣಾಮ ಬೀರಿ, ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ಕೆಲವರು ಇದ್ದಕ್ಕಿದ್ದಂತೆ ಮದ್ಯ ತ್ಯಜಿಸುತ್ತಾರೆ. ಇದರಿಂದ ಮಾನಸಿಕ ಸಮಸ್ಯೆಗಳು, ಕೋಪ, ಉದ್ವೇಗ, ಆಯಾಸ, ಗೊಂದಲ ಉಂಟಾಗುತ್ತದೆ ಎನ್ನುತ್ತಾರೆ ವೈದ್ಯರು.

ಇದನ್ನು ವಿತ್ ಡ್ರಾಯಲ್ ಸಿಂಡೋಮ್ ಎನ್ನುತ್ತಾರೆ. ಕೆಲವೊಮ್ಮೆ ನರವೈಜ್ಞಾನಿಕ ಸಮಸ್ಯೆಗಳೊಂದಿಗೆ ಬುದ್ದಿಮಾಂದ್ಯತೆ ಬರುತ್ತದೆಯಂತೆ. ಆದ್ದರಿಂದ, ಕುಟುಂಬ ಸದಸ್ಯರ ಸಹಾಯದಿಂದ ಕ್ರಮೇಣ ನಿಲ್ಲಿಸುವುದು ಒಳಿತು ಎಂದಿದ್ದಾರೆ.




