ರೈತರಿಗೆ 1 ಲೀಟರ್ ಹಾಲಿಗೆ ಸಹಾಯಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಇಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು ರೈತರಿಗೆ ಹಸುಗಳನ್ನು ಸಾಕಿ ಮೇವು ನೀಡಲು ನೆರವಾಗಲು ಸರ್ಕಾರ ಎಲ್ಲಾ ರೀತಿಯಿಂದಲೂ ಸಹಾಯಕ್ಕೆ ಮುಂದಾಗಿದೆ. ಮೇವಿನ ಹಿಂಡಿ ದರ ಹೆಚ್ಚಳವಾಗಿದೆ ಎಂದು ನಮ್ಮ ಸರ್ಕಾರ ಪ್ರತಿಲೀಟರ್ ಹಾಲಿನ ಮೇಲೆ 5 ರೂಪಾಯಿ ಸಹಾಯಧನವನ್ನು ನೀಡುತ್ತಿತ್ತು. ಅದನ್ನೀಗ 7 ರೂಪಾಯಿಗೆ ಹೆಚ್ಚಿಸುತ್ತಿದ್ದೇವೆ ಎಂದರು.
ನಮ್ಮ ಅಧಿಕಾರಾವಧಿಯಲ್ಲಿ ಹಾಲು ಉತ್ಪಾದಕರ ಸಹಾಯಧನ ಹೆಚ್ಚಿಸಲಾಗುವುದು ಎಂದರು.




