ನವದೆಹಲಿ: ವಿಜ್ಞಾನದ ಪ್ರಯೋಗಾಲಯಗಳಲ್ಲಿ ಸಹಾಯಕನಾಗಿ ಕೆಲಸ ಮಾಡಬಲ್ಲ ಕೃತಕ ಬುದ್ಧಿಮತ್ತೆ ಏಜೆಂಟ್‌ವೊಂದನ್ನು ದೆಹಲಿ ಐಐಟಿ ಸೃಷ್ಟಿ ಮಾಡಿದೆ.

ಇದು ಮಾನವನ ಸಹಾಯವಿಲ್ಲದೆ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳುವ ಮಟ್ಟಿಗೆ ಬುದ್ದಿಮತ್ತೆ ಹೊಂದಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ. ಎಐ ಏಜೆಂಟ್‌ಗಳನ್ನು ವಿವಿಧ ಕ್ಷೇತ್ರಗಳಲ್ಲಿ ಬಳಕೆ ಮಾಡಿಕೊಂಡಿದ್ದರೂ ಇದೇ ಮೊದಲ ಬಾರಿಗೆ ವೈಜ್ಞಾನಿಕ ಕ್ಷೇತ್ರದಲ್ಲಿ ಬಳಕೆ ಮಾಡಲಾಗುತ್ತಿದೆ.
ಯಾವುದೇ ಪ್ರಯೋಗಗಳನ್ನು ಕೈಗೊಳ್ಳುವ ಮುನ್ನ ಈ ಏಜೆಂಟ್‌ಗೆ ಸೂಚನೆಗಳನ್ನು ನೀಡಿದರೆ, ಅದು ಸ್ವಯಂಕೆಲಸ ಮಾಡಲಿದ್ದು, 1 ದಿನಗಳ ಕಾಲ ನಡೆಸಬೇಕಾಗದ್ದ ಪ್ರಯೋಗಗಳನ್ನು ಕೆಲವೇ ಗಂಟೆಗಳಲ್ಲಿ ಪೂರ್ಣ ಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.




