ಚರ್ಚ್ ಗೆ ಹೋಗಿದ್ದ ವೇಳೆ ಮನೆಯಲ್ಲಿ ದರೋಡೆ..!

Share with

ಕಾಸರಗೋಡು: ಮನೆಯವರು ಚರ್ಚ್‌ಗೆ ಹೋಗಿದ್ದ ಸಂದರ್ಭದಲ್ಲಿ ದರೋಡೆ ನಡೆದ ಘಟನೆ ಕಾಞಂಗಾಡ್ ನಲ್ಲಿ ನಡೆದಿದೆ. ಮನೆಯಿ೦ದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ದಾಖಲೆಗಳನ್ನು ಕದ್ದಿದ್ದಾರೆ ಎಂದು ದೂರು ನೀಡಲಾಗಿದೆ.

ಕಾಞಂಗಾಡ್‌ನ ಕುರುಂತೂರಿನ ಪಡನ್ನಕ್ಕಾಡ್‌ನಲ್ಲಿರುವ ಪಿ.ಕೆ. ಜೋಜಿ ಅವರ ಮನೆಯಲ್ಲಿ ಈ ರೀತಿ ದೋಚಲಾಗಿದೆ. ಬುಧವಾರ ಮಧ್ಯರಾತ್ರಿ 12 ಗಂಟೆಯಿಂದ ಗುರುವಾರ ಬೆಳಗಿನ ಜಾವ 2.30 ರ ನಡುವೆ ಈ ದರೋಡೆ ನಡೆದಿದೆ. ಮನೆಯ ಮು೦ಭಾಗದ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು ಎರಡು ಪವನ್ ಚಿನ್ನ, ಒಂದು ಬೆಳ್ಳಿ ತಾಯಿತ ಮತ್ತು ಕಪಾಟಿನಲ್ಲಿ ಇರಿಸಲಾಗಿದ್ದ ಇತರ ದಾಖಲೆಗಳನ್ನು ಕದ್ದಿದ್ದಾರೆ ಎಂದು ಹೊಸದುರ್ಗ ಪೊಲೀಸರಿಗೆ ದೂರು ನೀಡಲಾಗಿದೆ. ಎಸ್‌ಐಸಿಪಿ ಜಿಜೇಶ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.


Share with

Leave a Reply

Your email address will not be published. Required fields are marked *