ಟಾಲಿವುಡ್ ನಟ ಪ್ರಭಾಸ್ ಅವರು ‘ದಿ ರಾಜಾ ಸಾಬ್’ (The Raja Saab) ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾದಿಂದ 2ನೇ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇದು ಹಾರರ್ ಸಿನಿಮಾ ಎಂಬ ಕಾರಣಕ್ಕೆ ಪ್ರಭಾಸ್ (Prabhas) ಅವರ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಮನೆ ಮಾಡಿದೆ. 2026ರ ಜನವರಿ 9ರಂದು ಸಂಕ್ರಾಂತಿ ಪ್ರಯುಕ್ತ ಈ ಸಿನಿಮಾ ರಿಲೀಸ್ ಆಗಲಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ‘ದಿ ರಾಜಾ ಸಾಬ್’ ಸಿನಿಮಾದ ಎರಡನೇ ಟ್ರೇಲರ್ (The Raja Saab Trailer 2.0) ಅನಾವರಣ ಮಾಡಲಾಗಿದೆ. ಇದರಿಂದಾಗಿ ಸಿನಿಮಾದ ಬಹುತೇಕ ಕಥೆ ಬಹಿರಂಗ ಆದಂತೆ ಆಗಿದೆ.
ಮಾರುತಿ ಅವರು ‘ದಿ ರಾಜಾ ಸಾಬ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಜೊತೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ಸಂಜಯ್ ದತ್, ಬೋಮನ್ ಇರಾನಿ, ರಿಧಿ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ಅವರು ಮಾಡಿರುವ ಮೊದಲ ಹಾರರ್ ಸಿನಿಮಾ ಇದು. ಈ ಚಿತ್ರದಲ್ಲಿ ಸಂಜಯ್ ದತ್ ಅವರು ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.





