ಕಾಳು ಮೆಣಸು ಕೊಯ್ಯುತ್ತಿದ್ದಾಗ ತೆಂಗಿನ ಮರದಿಂದ ಬಿದ್ದು ನಿವೃತ್ತ ಮುಖ್ಯ ಶಿಕ್ಷಕ ಮೃತ್ಯು

Share with

ಬೆಟ್ಟಂಪಾಡಿ: ಕಾಳು ಮೆಣಸು ಕೊಯ್ಯುತ್ತಿದ್ದಾಗ ತೆಂಗಿನ ಮರದಿಂದ ಬಿದ್ದು ನಿವೃತ್ತ ಮುಖ್ಯ ಶಿಕ್ಷಕ, ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ನಿವಾಸಿ ನಾರಾಯಣ ನಾಯ್ಕ ಪೈಂತಿಮುಗೇರು ಮೃತಪಟ್ಟಿರುವ ಘಟನೆ ಜ.19ರಂದು ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆಯಲ್ಲಿ ಸಂಭವಿಸಿದೆ.

ಬೆಳಗ್ಗೆ ತನ್ನ ಮನೆ ಮುಂಭಾಗದಲ್ಲಿದ್ದ ತೆಂಗಿನ ಮರದಲ್ಲಿ ಬೆಳೆದಿದ್ದ ಕಾಳು ಮೆಣಸನ್ನು ಅಲ್ಯೂಮಿನಿಯಂ ಏಣಿ ಏರಿ ಕೊಯ್ಯುತ್ತಿದ್ದಾಗ ಏಣಿ ಸಹಿತ ಅವರು ಮರದಿಂದ ಜಾರಿ ಬಿದ್ದಿದ್ದಾರೆ. ಘಟನೆಯಿಂದ ನಾರಾಯಣ ನಾಯ್ಕರವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರ ರನ್ನು ಅಗಲಿದ್ದಾರೆ.

ಬಡಗನ್ನೂರು ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತಿಯಾಗಿದ್ದ ಅವರು, ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನ ದ ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಸಂಘ ಸಂಸ್ಥೆ ಗಳಲ್ಲಿ ಸಕ್ರಿಯರಾಗಿದ್ದರು.


Share with

Leave a Reply

Your email address will not be published. Required fields are marked *