ಧರ್ಮಸ್ಥಳ: ಉಗ್ರಂ ಮಂಜು ಮತ್ತು ಬಿಗ್ ಬಾಸ್ ಮಂಜು ಎಂದೇ ಖ್ಯಾತರಾದ ಚಲನಚಿತ್ರ ನಟ ಮಂಜುನಾಥ್ ರವರ ವಿವಾಹ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಸಾಯಿ ಸಂಧ್ಯಾರೊಂದಿಗೆ ಮಂಜು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಬಿಗ್ ಬಾಸ್ ಸೀಸನ್ 11ರಲ್ಲಿ ಗ್ರೇ ಏರಿಯಾ ಮಂಜು ಎಂದೇ ಖ್ಯಾತಿ ಪಡೆದಿದ್ದ ಮಂಜುನಾಥ್, ಸೀಸನ್ 12ರಲ್ಲಿ ತನ್ನ ಮದುವೆ ನಿಮಿತ್ತ ಅತಿಥಿಯಾಗಿ ಒಂದು ವಾರಗಳ ಕಾಲ ಮನೆಯೊಳಗೆ ತೆರಳಿದ್ದರು.




