ಒಂದೇ ಮನೆಯಲ್ಲಿ 50 ಸೆಲೆಬ್ರೇಟೀಸ್..! ಶುರುವಾಗಲಿದೆ ಭಾರತದ ಅತೀ ದೊಡ್ಡ ರಿಯಾಲಿಟಿ ಶೋ..!!

Share with

ಮುಂಬಯಿ: ಎಲ್ಲಾ ಭಾಷೆಯಲ್ಲಿ ಇತ್ತೀಚೆಗೆ ‘ಬಿಗ್ ಬಾಸ್’ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಟಿವಿ ಲೋಕದಲ್ಲಿ ತಿಂಗಳಿಗೊಮ್ಮೆ ಹೊಸ ಹೊಸ ರಿಯಾಲಿಟಿ ಶೋ ಬರುತ್ತಲೇ ಇರುತ್ತದೆ. ಈಗ ಭಾರತೀಯ ವೀಕ್ಷಕರಿಗೆ ಹೊಸ ಪರಿಚಯಾವಾಗಿ ‘ದಿ 50’ ಎನ್ನುವ ಶೋ ಆರಂಭವಾಗಲಿದೆ.

‘ಬಿಗ್ ಬಾಸ್’ ಶೋವನ್ನು ನಾವು ಹಲವು ಸೀಸನ್‌ಗಳಿಂದ ನೋಡುತ್ತಾ ಬರುತ್ತಿದ್ದೇವೆ. ಒಂದೇ ಮನೆಯಲ್ಲಿ 100ಕ್ಕೂ ಹೆಚ್ಚಿನ ದಿನ ನಾನಾ ಕ್ಷೇತ್ರದ ಸೆಲೆಬ್ರಿಟಿಗಳಿರುತ್ತಾರೆ. ಅಂತಿಮವಾಗಿ ನೀಡುವ ಟಾಸ್ಕ್‌ನಲ್ಲಿ ಗೆಲ್ಲುತ್ತಾ, ಅತ್ಯಧಿಕ ಜನರ ಬೆಂಬಲವನ್ನು ಪಡೆಯುತ್ತಾ ಬರುವವರು ‘ಬಿಗ್ ಬಾಸ್’ ಆಗಿ ಹೊರಹೊಮ್ಮುತ್ತಾರೆ.

ಹಿಂದಿ ಕಿರುತೆರೆ ಲೋಕದಲ್ಲಿ ಈಗ ‘ದಿ 50’ ಎನ್ನುವ ಶೋ ಪ್ರಿಮಿಯರ್ ಆಗಲು ಸಜ್ಜಾಗಿದೆ. ‘ದಿ 50’ ಶೋವನ್ನು ಭಾರತದ ಅತೀ ದೊಡ್ಡ ಶೋವೆಂದು ಹೇಳಲಾಗುತ್ತಿದೆ. ತನ್ನ ವಿಶೇಷ ಹಾಗೂ ನೂತನ ನಿಯಮಗಳಿಂದಲೇ ಸದ್ದು ಮಾಡುತ್ತಿದೆ. ಹಾಗಾದ್ರೆ ಈ ‘ದಿ 50’ ಕಾನ್ಸೆಪ್ಟ್ ಏನು?, ಇದು ಹೇಗೆ ನಡೆಯುತ್ತದೆ ಮತ್ತು ಯಾರೆಲ್ಲ ಸ್ಪರ್ಧಿಗಳಿದ್ದಾರೆ ಎನ್ನುವ ಕುರಿತ ಒಂದು ವರದಿ ಇಲ್ಲಿದೆ..

ಏನಿದು ದಿ’ 50′?:

ಭಾರತದ ಅತಿದೊಡ್ಡ ರಿಯಾಲಿಟಿ ಶೋ ಎಂದು ಹೇಳಲಾಗುತ್ತಿರುವ ‘ದಿ 50’ ಫ್ರೆಂಚ್ ‘ಲೆಸ್ ಸಿಂಕ್ವಾಂಟೆ’ನಿಂದ ಪ್ರೇರಿತವಾಗಿದೆ.

ಹಿಂದಿಯ ‘ದಿ 50’ ಶೋವನ್ನು ಬಾಲಿವುಡ್ ನಿರ್ಮಾಪಕಿ ಫರಾ ಖಾನ್ (Farah Khan) ಅವರು ನಿರೂಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮವು ಮುಂಬೈನ ಮಾಥ್ ದ್ವೀಪದಲ್ಲಿರುವ ಭವ್ಯ ಅರಮನೆಯಲ್ಲಿ ನಡೆಯಲಿದೆ.

ಶೋ ಕಾನ್ಸೆಪ್ಟ್ ಏನು?:

ಬಿಗ್‌ ಬಾಸ್‌ನಂತೆ ‘ದಿ 50’ ಕೂಡ ಒಂದೇ ಸ್ಥಳದಲ್ಲಿ ನಡೆಯಲಿದೆ. 50 ದಿನಗಳ ಕಾಲ ನಾನಾ ಕ್ಷೇತ್ರದ 50 ಸೆಲೆಬ್ರಿಟಿಗಳಿಗೆ ದೈಹಿಕ, ಮಾನಸಿಕ ಹಾಗೂ ಎಮೋಷನಲ್ ರೀತಿಯ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಟಾಸ್ಕ್‌ನಲ್ಲಿ ಗೆದ್ದವರು ಮುಂದಿನ ವಾರಕ್ಕೆ ಹೋಗುತ್ತಾರೆ. ಸೋತವರು ಎಲಿಮಿನೇಟ್ ಆಗುತ್ತಾರೆ.

ಶೋನಲ್ಲಿ “ದಿ ಲಯನ್” ಎಂದು ಕರೆಯಲ್ಪಡುವ ಗೇಮ್ ಮಾಸ್ಟರ್ ಇರಲಿದ್ದಾರೆ. ‘ದಿ ಲಯನ್’ ಬೆಂಬಲವಾಗಿ ಎರಡು ನರಿಗಳು, ಎರಡು ನಾಯಿಗಳು ಮತ್ತು ಎರಡು ಮೊಲಗಳನ್ನು ಒಳಗೊಂಡಿರುವ ಸೈನ್ಯ ಇರಲಿದೆ.

ಈ ಸೈನ್ಯ ಸ್ಪರ್ಧಿಗಳನ್ನು ತುಂಬ ಹತ್ತಿರದಿಂದ ನೋಡಲಿದೆ. ವಿಶೇಷವೆಂದರೆ ಯಾವುದೇ ಸಮಯದಲ್ಲಿ ಬೇಕಾದ್ರೂ ಶೋನ ನಿಯಮಗಳನ್ನು ಬದಲಾಯಿಸಬಹುದಾಗಿದೆ.

ಸ್ಪರ್ಧಿಗಳು ಯಾರು?:

‘ದಿ 50’ ಈಗಾಗಲೇ ದೊಡ್ಡಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಅದಕ್ಕೆ ಕಾರಣ ಶೋನಲ್ಲಿ ಭಾಗಿಯಾಗಲಿರುವ ಸ್ಪರ್ಧಿಗಳು. ಶೋಗೆ ಟಿವಿ ಲೋಕದ ಸ್ಟಾರ್ಸ್, ಸೋಶಿಯಲ್ ಮೀಡಿಯಾ ಪ್ರಭಾವಿಗಳು, ರಿಯಾಲಿಟಿ ಶೋ ಅನುಭವಿಗಳು ಮತ್ತು ಮ್ಯೂಸಿಕ್ ಲೋಕದ ಸ್ಟಾರ್ಸ್, ಖ್ಯಾತ ಯೂಟ್ಯೂಬರ್ಸ್, ಕಂಟೆಂಟ್ ಕ್ರಿಯೇಟರ್ಸ್, ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಸೇರಿದಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟೀಸ್ ಭಾಗಿಯಾಗಲಿದ್ದಾರೆ.

ಭಾಗಿಯಾಗಲಿರುವ ಸ್ಪರ್ಧಿಗಳ ಪಟ್ಟಿ ಇಲ್ಲಿದೆ..

  1. ನಟ ಕರಣ್ ಪಟೇಲ್
  2. ಮನಿಶಾ ರಾಣಿ ( ಸೋಶಿಯಲ್ ಮೀಡಿಯಾ ಪ್ರಭಾವಿ)
  3. ನಟಿ ರಿಧಿ ಡೋಗ್ರಾ
  4. ಫೈಸಲ್ ಶೇಖ್ (ಮಿಸ್ಟರ ಫೈಸು)
  5. ನಟ ಶೈನಿ ದೋಷಿ
  6. ರಿಯಾಲಿಟಿ ಟಿವಿ ಸ್ಟಾರ್ ಶಿವ್ ಠಾಕರೆ
  7. ರಿಯಾಲಿಟಿ ಟಿವಿ ಪರ್ಸನಾಲಿಟಿ ದಿವ್ಯಾ ಅಗರ್ವಾಲ್
  8. ನಟ ಊರ್ವಶಿ ಧೋಲಾಕಿಯಾ
  9. ರಿಯಾಲಿಟಿ ಟಿವಿ ಸ್ಟಾರ್ ಪ್ರಿನ್ಸ್ ನರುಲಾ
  10. ನಟ ಯುವಿಕಾ ಚೌಧರಿ
  11. ರಿಯಾಲಿಟಿ ಟಿವಿ ಪರ್ಸನಾಲಿಟಿ ಸಿದ್ದಾರ್ಥ್ ಭಾರದ್ವಾಜ್
  12. ರಿಯಾಲಿಟಿ ಟಿವಿ ಪರ್ಸನಾಲಿಟಿ ಅರ್ಚನಾ ಗೌತಮ್
  13. ಫಿಟೈಸ್ ಇನ್ನು ಯೆನ್ಸರ್ ಮತ್ತು ಪವರ್ಲಿಕ್ಟರ್ ರಜತ್ ದಲಾಲ್
  14. ನಟ ರಿದ್ದಿಮಾ ಪಂಡಿತ್
  15. ರಿಯಾಲಿಟಿ ಟಿವಿ ಸ್ಟಾರ್ ಸಿವೆಟ್ ತೋಮ‌ರ್
  16. ರಿಯಾಲಿಟಿ ಟಿವಿ ಸ್ಟಾರ್ ದಿಗ್ವಿಜಯ್ ರಥೀ
  1. ನಟ ಮತ್ತು ಉದ್ಯಮಿ ಶ್ರುತಿಕಾ ಅರ್ಜುನ್
  2. ರಿಯಾಲಿಟಿ ಟಿವಿ ಸ್ಟಾರ್ ನಿಕ್ಕಿ ತಾಂಬೋಲಿ
  3. ನಟ ಅರ್ಬಾಜ್ ಪಟೇಲ್
  4. ಯೂಟ್ಯೂಬರ್ ಲವ್ ಕಟಾರಿಯಾ
  1. ಡಿಜಿಟಲ್ ಕ್ರಿಯೇಟರ್ ಅರ್ಚಿತ್ ಕೌಶಿಕ್
  2. ಡಿಜಿಟಲ್ ಕ್ರಿಯೇಟರ್ ಲಕ್ಷಯ್ ಕೌಶಿಕ್
  3. ನಟ ಮತ್ತು ಗಾಯಕ ದಿಂಪಾಲ್ ಸಿಂಗ್
  4. ನಟ ಚಾಹತ್ ಪಾಂಡೆ
  5. ನಟ ನೀಲಂ ಗಿರಿ
  6. ನಟ ಮೊನಾಲಿಸಾ
  7. ನಟ ವಿಕ್ರಾಂತ್ ಸಿಂಗ್
  8. ರಿಯಾಲಿಟಿ ಟಿವಿ ಸ್ಟಾರ್ ಹಮೀದ್ ಬಾರ್ಕ್ಟಿ
  9. ಮಾಡೆಲ್ ಮತ್ತು ಫಿಟ್‌ನೆಸ್ ಐಕಾನ್ ನೇಹಲ್ ಚುಡಾಸಮಾ
  10. ಫಿಟೈಸ್ ಉದ್ಯಮಿ ಕೃಷ್ಣ ಶ್ರಾಫ್
  11. ಗಾಯಕ ಮತ್ತು ಗೀತರಚನೆಕಾರ ಅಮರ ಕಾಕಾ
  12. ಕ್ಯಾಪರ್ ಮತ್ತು ಸಂಗೀತ ಕಲಾವಿದ ಡಿನೋ ಜೇಮ್ಸ್
  1. ಯೂಟ್ಯೂಬರ್ ದುಶ್ಯಂತ್ ಕುಕ್ರೇಜಾ
  2. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸುಮೈರಾ ಶೇಖ್
  3. ಯೂಟ್ಯೂಬರ್ ಮತ್ತು ಗೇಮರ್ ವನ್ಮಾಜ್ ಸಿಂಗ್
  4. ಗಾಯಕಿ ಮತ್ತು ನೃತ್ಯಗಾರ್ತಿ ಸಪ್ನಾ ಚೌಧರಿ
  5. ಕಿರುತೆರೆ ನಟಿ ಜಾಹ್ನವಿ ಕಿರಣ್ ಕಿಲ್ಲೇಕರ್
  6. ಕ್ಯಾಪರ್ ಯುಂಗ್ ಸ್ಯಾಮಿ
  7. ಸಾಮಾಜಿಕ ಮಾಧ್ಯಮದ ಪ್ರಭಾವಿ ಅದ್ವಾನ್ ಶೇಖ್
  8. ರಿಯಾಲಿಟಿ ಟಿವಿ ಪರ್ಸನಾಲಿಟಿ ಬೇಬಿಕಾ ಧುರ್ವೆ
  9. ನಟ ಮತ್ತು ಲೇಖಕಿ ನಟಾಲಿಯಾ ಜಾನೋಸ್ಟಿಕ್
  10. ಯೂಟ್ಯೂಬರ್ ರಚಿತ್ ರೋಜಾ
  11. ಡಿಜಿಟಲ್ ಕ್ರಿಯೇಟರ್ ಫೈಜ್ ಬಲೋಚ್
  12. ಡಿಜಿಟಲ್ ಕ್ರಿಯೇಟರ್ ಮತ್ತು ನಟ ಸೌರಭ್ ಘಾಡ್ಡೆ
  13. ವೃತ್ತಿಪರ ನೃತ್ಯಗಾರ್ತಿ ಅರುಷಿ ಚಾವ್ಹಾ
  14. ಕ್ಯಾಪರ್ ಮತ್ತು ಗಾಯಕ ಆರ್ಯ ಜಾಧಾವೊ
  15. ನಟ ಮತ್ತು ನೃತ್ಯಗಾರ್ತಿ ತೇಜಸ್ವಿ ಮಡಿವಾಡ
  16. ಯೂಟ್ಯೂಬರ್ ಮ್ಯಾರ್ನ್
  17. ಗಾಯಕ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಖಂಜಾದಿ
  18. ಡಿಜಿಟಲ್ ಕ್ರಿಯೇಟರ್ ಮತ್ತು ನಟ ಭವ್ಯಾ ಸಿಂಗ್

ಯಾವಾಗ ಆರಂಭ; ಎಲ್ಲಿ? :

ಇದೇ ಫೆ.1ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ರಾತ್ರಿ 9 ಗಂಟೆಗೆ ‘ದಿ 50’ ಸ್ಟ್ರೀಮ್ ಆಗಲಿದೆ. ಆ ಬಳಿಕ ರಾತ್ರಿ 10:30ಕ್ಕೆ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗಲಿದೆ.


Share with

Leave a Reply

Your email address will not be published. Required fields are marked *