ಹೋಳಿ ಹಿನ್ನೆಲೆ: ಅಹಮದಾದ್ – ಮಂಗಳೂರಿಗೆ ವಿಶೇಷ ರೈಲು

Share with

ಮಂಗಳೂರು: ಹೋಳಿ ಹಿನ್ನೆಲೆಯಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟನೆ ನಿವಾರಿಸಲು ಹೋಲಿ ವಿಶೇಷ ರೈಲುಗಳನ್ನು ಆರಂಭಿಸಲಾಗುತ್ತಿದೆ.

ನಂ. 09424 ಅಹಮದಾದ್ ಜಂಕ್ಷನ್ – ಮಂಗಳೂರು ಜಂಕ್ಷನ್ ಉತ್ಸವ ವಿಶೇಷ ರೈಲು ಅಹಮದಾಬಾದ್ ಜಂಕ್ಷನ್‌ನಿಂದ ಫೆ. 27ರಿಂದ ಮಾ. 20ರ ವರೆಗೆ ಪ್ರತಿ ಶುಕ್ರವಾರದಂದು ಸಂಜೆ 4.30ಕ್ಕೆ ಹೊರಟು ಮರುದಿನ ಮಂಗಳೂರು ಜಂಕ್ಷನ್‌ಗೆ ರಾತ್ರಿ 8ಕ್ಕೆ ತಲಪಲಿದೆ (4 ಸೇವೆಗಳು).

ನಂ. 09423 ಮಂಗಳೂರು ಜಂಕ್ಷನ್ – ಅಹಮದಾಬಾದ್ ಜಂಕ್ಷನ್ ಉತ್ಸವ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಫೆ. 28ರಿಂದ ಮಾ. 21ರ ವರೆಗೆ ಪ್ರತಿ ಶನಿವಾರದಂದು ರಾತ್ರಿ 10.30ಕ್ಕೆ ಹೊರಟು ಪ್ರತಿ ಸೋಮವಾರದಂದು ಮುಂಜಾನೆ 2.15ಕ್ಕೆ ಅಹಮದಾಬಾದ್ ಜಂಕ್ಷನ್ ತಲಪಲಿದೆ (4 ಸೇವೆ).

ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಬೈಂದೂರು ಮೂಕಾಂಬಿಕಾ ರೋಡ್, ಭಟ್ಕಳ, ಮುರುಡೇಶ್ವರ, ಕುಮಟ, ಗೋಕರ್ಣ ರೋಡ್, ಅಂಕೋಲ, ಕಾರವಾರ, ಕಾನಕೋನ, ಮಡಗಾಂವ್ ಜಂಕ್ಷನ್, ಕರ್ಮಾಲಿ, ತಿವಿಂ, ಕುಡಾಳ್‌, ಸಿಂಧುದುರ್ಗ, ಕಂಕಾವಲಿ, ವೈಭವವಾಡಿ ರೋಡ್, ರಾಜಾಪುರ್ ರೋಡ್, ರತ್ನಗಿರಿ, ಸಂಗಮೇಶ್ವರ ರೋಡ್, ಸವಾರ್ದ, ಚಿಪ್ಪುನ್, ಖೇಡ್, ಮನಗಾಂವ್, ರೋಹ, ಪೆನ್, ಪನ್ವೆಲ್, ಭಿವಂಡಿ ರೋಡ್, ವಸಾಯ್ ರೋಡ್, ವಾಪಿ, ಸೂರತ್, ಭರೂಚ್ ಜಂಕ್ಷನ್, ವಡೋದರ ಜಂಕ್ಷನ್, ಆನಂದ್ ಜಂಕ್ಷನ್, ನಾದಿಯಾಡ್ ಜಂಕ್ಷನ್‌ಗಳಲ್ಲಿ ನಿಲುಗಡೆ ಇರುತ್ತದೆ.


Share with

Leave a Reply

Your email address will not be published. Required fields are marked *