ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ..!! ವಿಮಾನ ಹಾರಾಟ ಸ್ಥಗಿತ

Share with

ದುಬೈ: ಇರಾನ್‌ ಮತ್ತು ಇಸ್ರೇಲ್-ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಶನಿವಾರ (ಮಾ.7) ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಮತ್ತೊಮ್ಮೆ ಡೋನ್ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈನಲ್ಲಿ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಇರಾನ್ ಉಡಾಯಿಸಿದ ಡೋನ್‌ಗಳನ್ನು ಯುಎಇ (UAE) ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆದಿದೆ. ಆದರೆ, ಹೊಡೆದುರುಳಿಸಿದ ಡೋನ್ನ ಅವಶೇಷಗಳು ವಿಮಾನ ನಿಲ್ದಾಣದ ರನ್‌ವೇ ಸಮೀಪ ಬಿದ್ದಿದ್ದರಿಂದ ಭಾರೀ ಹೊಗೆ ಕಾಣಿಸಿಕೊಂಡಿದೆ.

ದಾಳಿಯ ಮುನ್ಸೂಚನೆ ಸಿಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿದ್ದ ನೂರಾರು ಪ್ರಯಾಣಿಕರು ಸುರಕ್ಷಿತ ಸ್ಥಳಗಳಿಗಾಗಿ ರೈಲ್ವೆ ಸುರಂಗಗಳತ್ತ ಧಾವಿಸಿದ್ದಾರೆ.

ಘಟನೆಯಿಂದಾಗಿ ಎಮಿರೇಟ್ಸ್ ಸೇರಿದಂತೆ ಪ್ರಮುಖ ಏರ್‌ಲೈನ್ಸ್‌ಗಳು ತಮ್ಮ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದವು. ಅನೇಕ ವಿಮಾನಗಳನ್ನು ಹತ್ತಿರದ ಇತರ ನಿಲ್ದಾಣಗಳಿಗೆ ತಿರುಗಿಸಲಾಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತಂದ ನಂತರ, ದುಬೈ ವಿಮಾನ ನಿಲ್ದಾಣವು ಇದೀಗ ಭಾಗಶಃ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಆದಾಗ್ಯೂ, ವಿಮಾನದ ಸಮಯದ ಬಗ್ಗೆ ಖಚಿತ ಮಾಹಿತಿ ಪಡೆದ ನಂತರವೇ ಪ್ರಯಾಣಿಕರು ನಿಲ್ದಾಣಕ್ಕೆ ಬರುವಂತೆ ಸೂಚಿಸಲಾಗಿದೆ.

ಇರಾನ್ ಎಚ್ಚರಿಕೆ:

ಇದೇ ವೇಳೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಚಿಯನ್ ಮಾತನಾಡುತ್ತಾ, “ನೆರೆಯ ರಾಷ್ಟ್ರಗಳ ವಿರುದ್ಧ ದಾಳಿ ಮಾಡುವ ಉದ್ದೇಶ ನಮಗಿಲ್ಲ. ಆದರೆ ನಮ್ಮ ದೇಶದ ಮೇಲೆ ದಾಳಿ ನಡೆಸಲು ಈ ರಾಷ್ಟ್ರಗಳ ಭೂಮಿಯನ್ನು ಬಳಸಿಕೊಟ್ಟರೆ ಸುಮ್ಮನಿರುವುದಿಲ್ಲ,” ಎಂದು ಎಚ್ಚರಿಕೆ ನೀಡಿದ್ದಾರೆ.


Share with

Leave a Reply

Your email address will not be published. Required fields are marked *