ಯುದ್ಧದಿಂದ ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಪೂರೈಕೆ ವ್ಯತ್ಯಯವಾಗಿದೆ. ಸಿಲಿಂಡರ್ಗಳ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ಹೋಟೆಲ್ನವರು ಗ್ರಾಹಕರ ಮೇಲೆ ಆ ಹೊರೆಯನ್ನು ಹಾಕುತ್ತಿದ್ದಾರೆ.

ಗ್ಯಾಸ್ ಪೂರೈಕೆ ಸಮಸ್ಯೆ ಹೆಸರಿನಲ್ಲಿ ತಿಂಡಿಯ ಬಿಲ್ಗೆ ಹೆಚ್ಚುವರಿ ಗ್ಯಾಸ್ ಶುಲ್ಕ ಸೇರಿಸುತ್ತಿದ್ದಾರೆ. ಚೆನ್ನೈ & ಬೆಂಗಳೂರಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಚೆನ್ನೈಯಲ್ಲಿ ಗ್ರಾಹಕರೊಬ್ಬರು ತಿಂದ ಇಡ್ಲಿ & ವಡಾದ ಬಿಲ್ ಜೊತೆ ₹9.52 ಹೆಚ್ಚುವರಿ ಗ್ಯಾಸ್ ಶುಲ್ಕ ಪಾವತಿಸಿದ್ದಾರೆ.




