ಬೆಂಗಳೂರು, ಮಾರ್ಚ್ 15:ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯ. ಅದರಲ್ಲೂ ಈ ಬೆಂಗಳೂರಿನಲ್ಲಿ ಬೆಳಗ್ಗೆ ಸಂಜೆಯಾದರಂತೂ ಟ್ರಾಫಿಕ್‌ನಿಂದ ರಸ್ತೆಗಳು ಬ್ಲಾಕ್ ಆಗುತ್ತದೆ. ಪೀಕ್ ಟೈಮ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿರುತ್ತದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಆಫೀಸಿಗೆ ಹೋಗುವ ವೇಳೆ ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ. ಈ ವ್ಯಕ್ತಿ 6.5 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡೆ ಎಂದು ನಗರದ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ನಗರದಲ್ಲಿನ ದೈನಂದಿನ ಸಂಚಾರ ತೊಂದರೆಗಳನ್ನು ಈ ವಿಡಿಯೋ ಎತ್ತಿ ತೋರಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಸಮಸ್ಯೆ ಹೊಸದೇನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಂಕಜ್ ಹುರಿಯಾ (pankaj.huria.1209) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡ ವಿಡಿಯೋಗೆ ಇದು ಬೆಂಗಳೂರಿನ ವಾಸ್ತವ ಎಂದು ಶೀರ್ಷಿಕೆ ನೀಡಲಾಗಿದೆ. ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾಗ ತಮ್ಮ ಈ ಪ್ರಯಾಣವನ್ನು ದಾಖಲಿಸುವ ವಿಡಿಯೋ ಮಾಡಿದ್ದಾರೆ. ಬೆಳಿಗ್ಗೆ 9.15 ಕ್ಕೆ ಮನೆಯಿಂದ ಹೊರಟು ಕೇವಲ 6.5 ಕಿಲೋಮೀಟರ್ ದೂರದಲ್ಲಿರುವ ತನ್ನ ಕಚೇರಿಗೆ ಹೋದೆನು ಎಂದು ವಿವರಿಸಿದ್ದಾರೆ. ಆದರೆ, ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಕಳೆದ ನಂತರವೂ, ಭಾರೀ ದಟ್ಟಣೆಯಂತೂ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.





