ಮಂಗಳೂರಿಗೆ ಬರಲಿದೆ LPG ನೌಕೆ ಶಿವಾಲಿಕ್..!

Share with

ಮಂಗಳೂರು: ಹೊರ್ಮುಜ್ ಜಲಸಂಧಿಯಿಂದ ಯಶಸ್ವಿಯಾಗಿ ದಾಟಿ, ಪ್ರಸ್ತುತ ಗುಜರಾತ್‌ನ ಮುಂದ್ರಾ ಬಂದರಿಗೆ ಬಂದಿರುವ ಎಲ್‌ಪಿಜಿ ವಾಹಕ ನೌಕೆ ಶಿವಾಲಿಕ್, ಮುಂದಿನ ಪ್ರಯಾಣದಲ್ಲಿ ನವಮಂಗಳೂರು ಬಂದರಿಗೆ ಬರುವ ನಿರೀಕ್ಷೆ ಇದೆ.

ಒಟ್ಟು 46 ಸಾವಿರ ಮಿಲಿಯನ್‌ ಟನ್‌ನಷ್ಟು ಎಲ್‌ಪಿಜಿ ಹೇರಿಕೊಂಡು ಬಂದಿರುವ ಈ ನೌಕೆಯಿಂದ 20 ಸಾವಿರ ಮೆ. ಟನ್ ಮುಂದ್ರಾದಲ್ಲಿ ಇಳಿಸಲಾಗುತ್ತದೆ, ಉಳಿದ 26 ಸಾವಿರ ಮೆ. ಟನ್‌ ಅನ್ನು ಮಂಗಳೂರು ಬಂದರಿನಲ್ಲಿ ಇಳಿಸುವ ಸಾಧ್ಯತೆ ಇದೆ, ಈ ಎಲ್‌ಪಿಜಿಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನವರು ತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕತಾರ್‌ನ ರಾಸ್‌ ಲಫಾನ್ ಬಂದರಿನಿಂದ ಎಲ್‌ಪಿಜಿ ಹೇರಿಕೊಂಡು ಮಾರ್ಚ್ ಮೊದಲ ವಾರ ಹೊರಟಿದ್ದ ಶಿವಾಲಿಕ್ ಹಾಗೂ ನಂದಾದೇವಿ ಎಲ್‌ಪಿಜಿ ವಾಹಕ ಹಡಗುಗಳು ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯಿಂದಾಗಿ ಹೊರ್ಮುಜ್ ಜಲಸಂಧಿ ದಾಟಲಾಗದೆ ಬಾಕಿಯಾಗಿದ್ದವು. ಇರಾನ್ ಸರಕಾರ ಭಾರತದ ನೌಕೆಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಅನುವು ಮಾಡಿಕೊಟ್ಟ ಬಳಿಕ ಹೊರಟಿರುವ ಎರಡೂ ನೌಕೆಗಳು ಭಾರತ ತಲುಪಿವೆ.


Share with

Leave a Reply

Your email address will not be published. Required fields are marked *