ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರನ್ನು ಹೊರಗೆ ಕಳುಹಿಸಲು ಅಮೆರಿಕದ ಸರ್ಕಾರ ಹೊಸ ಪ್ಲಾನ್ ಹಾಕಿದೆ. US ನಲ್ಲಿ ಅಕ್ರಮವಾಗಿ ನೆಲಸಿರುವ ವಲಸಿಗರು ತಾವಾಗಿಯೇ ಹೊರಹೋಗುವುದಾದರೆ ಅವರಿಗೆ 2,600 ಡಾಲರ್‌ಗಳ( ₹2,50,000) ಎಕ್ಸಿಟ್ ಬೋನಸ್ ಕೊಡಲಾಗುವುದು. ಜೊತೆಗೆ, ದಂಡಪಾವತಿ ಹಾಗೂ ಇತ್ಯಾದಿಯಿಂದ ವಿನಾಯಿತಿ ಸಿಗುತ್ತದೆ. ಫೈಟ್ ಟಿಕೆಟ್ ಅನ್ನೂ US ಸರ್ಕಾರವೇ ಒದಗಿಸುತ್ತದೆ ಎಂದು ಅಮೆರಿಕದ ಗೃಹ ಭದ್ರತಾ ಇಲಾಖೆ ಈ ಆಫರ್ ಅನ್ನು ಅಕ್ರಮ ವಲಸಿಗರಿಗೆ ನೀಡಿದೆ.





