ಭಯೋತ್ಪಾದನೆ ಆರೋಪ: 7 ಮಂದಿ ವಿದೇಶಿಯರು ಅರೆಸ್ಟ್..!

Share with

ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಅಧಿಕಾರಿಗಳು 6 ಉಕ್ರೇನಿಯನ್ನರು ಮತ್ತು ಒಬ್ಬ ಅಮೇರಿಕನ್ ಪ್ರಜೆಯನ್ನು ಬಂಧಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ 3 ವಿಮಾನ ನಿಲ್ದಾಣಗಳಲ್ಲಿ 7 ವಿದೇಶಿ ಪ್ರಜೆಗಳನ್ನು UAPA ಅಡಿಯಲ್ಲಿ ಬಂಧಿಸಿತ್ತು. ಆರೋಪಿಗಳು ಪ್ರಸ್ತುತ ಎನ್​ಐಎ ವಶದಲ್ಲಿದ್ದಾರೆ. ಅವರನ್ನು ಇಂದು ಪಟಿಯಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಡ್ರೋನ್ ಯುದ್ಧದಲ್ಲಿ ತರಬೇತಿ ನೀಡುವ ಪಿತೂರಿಯ ತನಿಖೆಗಾಗಿ ದೆಹಲಿ ನ್ಯಾಯಾಲಯವು ಭಯೋತ್ಪಾದನಾ ನಿಗ್ರಹ ಸಂಸ್ಥೆಗೆ 11 ದಿನಗಳ ಕಾಲಾವಕಾಶ ನೀಡಿದ ನಂತರ ಒಬ್ಬ ಅಮೆರಿಕನ್, 6 ಮಂದಿ ಉಕ್ರೇನಿಯನ್ ಪ್ರಜೆಗಳು ಸೇರಿದಂತೆ 7 ವಿದೇಶಿ ಪ್ರಜೆಗಳು NIA ಕಸ್ಟಡಿಯಲ್ಲಿದ್ದಾರೆ. NIA 15 ದಿನಗಳ ಕಾಲಾವಕಾಶ ಕೋರಿತ್ತು. ಆದರೆ ನ್ಯಾಯಾಲಯವು 11 ದಿನಗಳ ಕಾಲಾವಕಾಶ ನೀಡಿತ್ತು. ಆ ಆರೋಪಿಗಳನ್ನು ಮಾರ್ಚ್ 27ರಂದು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು.

ಅಮೆರಿಕನ್ ಪ್ರಜೆ ಮ್ಯಾಥ್ಯೂ ವ್ಯಾನ್‌ಡೈಕ್ ಅವರನ್ನು ಕೋಲ್ಕತ್ತಾದಿಂದ ಬಂಧಿಸಲಾಯಿತು. ಮೂವರು ಉಕ್ರೇನಿಯನ್ನರನ್ನು ಲಕ್ನೋದಿಂದ ಮತ್ತು ಇತರ ಮೂವರನ್ನು ದೆಹಲಿಯಿಂದ ಬಂಧಿಸಲಾಗಿದೆ. ಅವರನ್ನು ಹುರ್ಬಾ ಪೆಟ್ರೋ, ಸ್ಲೈವಿಯಾಕ್ ತಾರಸ್, ಇವಾನ್ ಸುಕ್ಮನೋವ್ಸ್ಕಿ, ಸ್ಟೆಫನ್‌ಕಿವ್ ಮರಿಯನ್, ಹೊಂಚರುಕ್ ಮ್ಯಾಕ್ಸಿಮ್ ಮತ್ತು ಕಾಮಿನ್ಸ್ಕಿ ವಿಕ್ಟರ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಪ್ರತಿ 48 ಗಂಟೆಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕೆಂದು ನ್ಯಾಯಾಲಯವು ನಿರ್ದೇಶಿಸಿದೆ. ಒಂದು ದಿನ ಬಿಟ್ಟು ಮತ್ತೊಂದು ದಿನ 20 ನಿಮಿಷಗಳ ಕಾಲ ವಕೀಲರು ಅಥವಾ ಸಂಬಂಧಿಕರೊಂದಿಗೆ ವರ್ಚುವಲ್ ಸಭೆಗಳನ್ನು ನಡೆಸಲು ಅವರಿಗೆ ಅವಕಾಶ ನೀಡಲಾಗಿದೆ.


Share with

Leave a Reply

Your email address will not be published. Required fields are marked *