ಉಡುಪಿ/ಮಂಗಳೂರು: ಗುರುವಾರ (ಮಾ.18) ಚಂದ್ರದರ್ಶನವಾದ ಶುಕ್ರವಾರ(ಮಾ.20) ಕರಾವಳಿಯಾದ್ಯಂತ (ದ.ಕ – ಉಡುಪಿ) ಈದುಲ್ ಫಿತ್ ಹಬ್ಬವನ್ನು ನಾಳೆ (ಮಾ.20, ಶುಕ್ರವಾರ) ಆಚರಿಸಲಾಗುವುದು ಎಂದು ಜಿಲ್ಲಾ ಖಾಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಸೂರ್ಯಾಸ್ತದ ನಂತರ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಆಗಿರುವ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝರಿ ನಾಳೆ ಶವ್ವಾಲ್ 1ರಂದು ಈದುಲ್ ಫಿತ್ ಹಬ್ಬವನ್ನು ಆಚರಿಸುವುದಾಗಿ ಘೋಷಿಸಿದ್ದಾರೆ.
ಉಡುಪಿಯಲ್ಲೂ ನಾಳೆ ಈದುಲ್ ಫಿತ್ ಹಬ್ಬವನ್ನು ಆಚರಿಸಲಾಗುತ್ತಿದೆ.




