ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದ ಪರಿಣಾಮವಾಗಿ ಔಷಧಿಗಳ ದರ ಏರಿಕೆಯಾದರೆ ಏನು ಮಾಡೋಕೆ ಆಗಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಲೆ ಏರಿಕೆಗಳು ಹಾಗೂ ವಾರ್ ಎಫೆಕ್ಟ್ ಬಗ್ಗೆ ಮಾತನಾಡಿದ ಅವರು, ಔಷಧಿಗಳ ದರ ಏರಿಕೆಯು ಕೇಂದ್ರ ಸರ್ಕಾರ ಪಾಲಿಸಿಯ ಮೇಲೆ ನಿರ್ಧಾರ ಆಗುತ್ತದೆ. ಔಷಧಿಗಳ ದರ ಏರಿಕೆ ಮಾಡೋದು ನಮ್ಮ ಕೈಯಲ್ಲಿ ಇಲ್ಲ. ರೋಗಿಗಳಿಗೆ ಔಷಧ ಕಡಿಮೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ರೋಗಿಗಳ ಹಿತದೃಷ್ಟಿಯೇ ನಮಗೆ ಮುಖ್ಯ ಎಂದು ಹೇಳಿದ್ದಾರೆ.




