ಗ್ರಾಮೀಣ ಜನರ ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಬಾಕಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮನರೇಗಾ ಯೋಜನೆ ಮಾರ್ಚ್ 31ಕ್ಕೆ ಕೊನೆಯಾಗಿದೆ. ಕರ್ನಾಟಕಕ್ಕೆ ₹1,943 ಕೋಟಿ ಅನುದಾನ ಬಾಕಿ ಇದೆ. ಇದುವರೆಗೂ ಕೇಂದ್ರ ಯಾವುದೇ ಸ್ಪಷ್ಟತೆ ನೀಡಿಲ್ಲ, ಏಪ್ರಿಲ್ 1ರಿಂದ ಜನರಿಗೆ ಉದ್ಯೋಗ ಒದಗಿಸಬೇಕಿದ್ದ ವಿಬಿ ಗ್ರಾಮ್ ಜಿ ಯೋಜನೆಯ ಸುಳಿವೂ ಇಲ್ಲ. ಈ ಯೋಜನೆಯ ಜಾರಿಗೆ ನಿಯಮಗಳ ರೂಪುರೇಷೆಯೂ ಸಿದ್ಧವಾಗಿಲ್ಲ’ ಎಂದಿದ್ದಾರೆ.




