ತಂದೆಯನ್ನೇ ಕೊಲೆಗೆ ಯತ್ನಿಸಿದ ಮಗ..! ಆಸ್ಪತ್ರೆಗೆ ದಾಖಲಾದ ತಂದೆ

Share with

ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ಮಗನೇ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಎ.21ರ ಮಂಗಳವಾರ ನಡೆದಿದೆ.

ಗಾಯಗೊಂಡ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ, ಮಗ ಭರತ್ (25) ನ್ನು ಪೊಲೀಸರು ಬಂಧಿಸಿದ್ದಾರೆ.

ಉಜಿರೆ ಗ್ರಾಮದ ಮಣಿಕೆ ನಿವಾಸಿ, ಗಾರೆ ಕೆಲಸ ಮಾಡುತ್ತಿರುವ ನಾರಾಯಣ (52) ಹಾಗೂ ಟಿಂಬರ್‌ ಕೆಲಸ ಮಾಡುತ್ತಿದ್ದ ಮಗ ಭರತ್ ನಡುವೆ ಮನೆಯಲ್ಲಿ ಗಲಾಟೆ ನಡೆದಿದೆ. ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಮನೆಯ ಹೊರಭಾಗದಲ್ಲಿದ್ದ ತಂದೆಗೆ ಮಗ ಭರತ್ ಕತ್ತಿಯಿಂದ ಕುತ್ತಿಗೆ ಮತ್ತು ಕೈಗೆ ಕಡಿದಿದ್ದಾನೆ.


Share with

Leave a Reply

Your email address will not be published. Required fields are marked *