ಅಪ್ರಾಪ್ತೆ ಎಂಬ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಮೊನಾಲಿಸಾ ಗರ್ಭಿಣಿ ಎಂದ ಫರ್ಮಾನ್..!

Share with

ಭೋಪಾಲ್‌: ಕುಂಭಮೇಳ ಖ್ಯಾತಿಯ ಮೊನಾಲಿಸಾ ಭೋಸ್ಥೆಯ ಫರ್ಮಾನ್ ಜತೆ ಮದುವೆಯಾದ ಬಳಿಕ ಸುದ್ದಿಯಲ್ಲಿದ್ದಾರೆ.

ಕೇರಳದಲ್ಲಿ ಫರ್ಮಾನ್ ಜತೆ ಮೊನಾಲಿಸಾ ವಿವಾಹವಾಗಿದ್ದರು. ವಿವಾಹದ ಬಳಿಕ ಅನೇಕರು ಇದನ್ನು ‘ಲವ್ ಜಿಹಾದ್’ ಎಂದು ಕರೆದಿದ್ದರು. ಆದಾದ ಬಳಿಕ ಇತ್ತೀಚೆಗೆ ಮೊನಾಲಿಸಾ ಅಪ್ರಾಪ್ತ ಎನ್ನುವುದು ತಿಳಿದು ಬಂದಿದ್ದು, ಆ ನಂತ್ರದಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತಿ ದೂರು ನೀಡಿದ್ದರು.

ಫರ್ಮಾನ್ ವಿರುದ್ಧ ಪೋಕ್ಸ್ ಕೇಸ್ ಕೂಡ ದಾಖಲಾಗಿದೆ. ತನಿಖೆಯ ಭಾಗವಾಗಿ ಮೊನಾಲಿಸಾ ಅವರನ್ನು ಪೊಲೀಸರು ಮಧ್ಯ ಪ್ರದೇಶಕ್ಕೆ ವಿಚಾರಣೆ ಕರೆದಿದ್ದಾರೆ. ಆದರೆ ಆಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲವೆಂದು ಫರ್ಮಾನ್ ಪೊಲೀಸರಿಗೆ ಹೇಳಿದ್ದಾರೆ.

ಗರ್ಭಿಣಿ ಎಂಬ ಮಾಹಿತಿ ನೀಡಿದ ಫರ್ಮಾನ್ ಖಾನ್

ನ್ಯೂಸ್-18 ವರದಿಯ ಪ್ರಕಾರ, ತನಿಖೆಯ ಭಾಗವಾಗಿ ಹೇಳಿಕೆ ದಾಖಲಿಸಲು ಮೊನಾಲಿಸಾ ಪೊಲೀಸರ ಮುಂದೆ ಹಾಜರಾಗಬೇಕಿತ್ತು. ಆದರೆ, ಆಕೆ ಗರ್ಭಿಣಿಯಾಗಿರುವ ಕಾರಣ ಆರೋಗ್ಯದ ದೃಷ್ಟಿಯಿಂದ ಬರಲು ಸಾಧ್ಯವಿಲ್ಲ ಎಂದು ಫರ್ಮಾನ್ ಮಾಹಿತಿ ನೀಡಿದ್ದಾರೆ.

ಸದ್ಯ ಪೊಲೀಸರು ಈ ಸುಳ್ಳೋ ಅಥವಾ ನಿಜವೋ ಎಂಬುದನ್ನು ಪತ್ತೆಹಚ್ಚಲು ವೈದ್ಯಕೀಯ ದೃಢೀಕರಣವನ್ನು ಕೋರುವ ಸಾಧ್ಯತೆಯಿದೆ. ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗಲಿದೆ.

ಏನಿದು ವಿವಾದ?

ಕೇರಳದ ದೇವಾಲಯವೊಂದರಲ್ಲಿ ಸ್ಥಳೀಯ ನಾಯಕರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಿತ್ತು. ತನ್ನ ಕುಟುಂಬದವರು ತನ್ನನ್ನು ಸೋದರಸಂಬಂಧಿಯೊಂದಿಗೆ ಮದುವೆ ಮಾಡಲು ಒತ್ತಾಯಿಸುತ್ತಿದ್ದರು ಎಂದು ಮೊನಾಲಿಸಾ ಈ ಹಿಂದೆ ಆರೋಪಿಸಿದ್ದರು. ಆದರೆ, ಮೊನಾಲಿಸಾ ಅಪ್ರಾಪ್ತ ವಯಸ್ಕಳು ಎಂದು ಆಕೆಯ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಮದುವೆ ಕಾನೂನು ಸಂಕಷ್ಟಕ್ಕೆ ಸಿಲುಕಿದೆ.


Share with

Leave a Reply

Your email address will not be published. Required fields are marked *