ಮಂಗಳೂರು/ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆ ಆಗಮಿಸಿರುವ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ನೂರಾರು ಅಭಿಮಾನಿಗಳು ನೆಚ್ಚಿನ ನಟ, ರಾಜಕಾರಣಿಯನ್ನು ಕಾಣಲು ಕಾದು ನಿಂತಿದ್ದರು.

ರಸ್ತೆ ಮಾರ್ಗದ ಮೂಲಕವೇ ಕೊಲ್ಲೂರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು. ಪೊಲೀಸ್ ಭದ್ರತೆ ಯಾ ನಡುವೆ ವಿಮಾನ ನಿಲ್ದಾಣದಿಂದ ಹೊರ ಬಂದ ವಿಜಯ್ ನಗುನಗುತ್ತಾ ಅಭಿಮಾನಿಗಳತ್ತ ಕೈಬೀಸಿ ಪ್ರಯಾಣ ಮುಂದುವರಿಸಿದರು.
ಕೊಲ್ಲೂರು ದೇವಾಲಯದ ಸುತ್ತಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ವಿಜಯ್ ಅವರು ದೇವಾಲಯದಲ್ಲಿ ಮೂಕಾಂಬಿಕೆಯ ದರ್ಶನ ಪಡೆಯಲಿದ್ದಾರೆ. ಈ ವೇಳೆ ಸಾಮಾನ್ಯ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ದೇವಾಲಯದ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಉಡುಪಿಯ ವಿವಿಧೆಡೆಯಿಂದ ಅನೇಕ ಭಕ್ತರು ವಿಜಯ್ ಅವರನ್ನು ನೋಡಲೆಂದೇ ಆಗಮಿಸಿದ್ದು ಕೊಲ್ಲೂರಿನಲ್ಲಿ ಕಾದು ಕುಳಿತಿದ್ದಾರೆ.




