ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಇತ್ತೀಚೆಗಷ್ಟೇ ತಮ್ಮ ಅಳಿಯ ಸಂಚಿತ್ ಸಂಜೀವ್ ನಟಿಸಿದ್ದ ‘ಮ್ಯಾಂಗೋ ಪಚ್ಚ’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ಪ್ರಿಯಾ ಸುದೀಪ್ ಅವರು ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಮತ್ತು ಕಥೆಗಾರರಿಗೆ ಮತ್ತೊಂದು ಸುವರ್ಣ ಅವಕಾಶವನ್ನು ಹೊತ್ತು ತಂದಿದ್ದಾರೆ.

ತಮ್ಮ ಅಧಿಕೃತ ಬ್ಯಾನರ್ ಆದ ‘ಸುಪ್ರಿಯಾನ್ವಿ ಪಿಕ್ಟರ್ ಸ್ಟುಡಿಯೋ’ ಮೂಲಕ ಹೊಸ ಕಥೆಗಳನ್ನು ಆಹ್ವಾನಿಸಿ ಪ್ರಿಯಾ SM’ನಲ್ಲಿ ಪೋಸ್ಟ್ ಮಾಡಿದ್ದಾರೆ.




