ಜನಸ್ನೇಹಿ ವೈದ್ಯ ಡಾ. ಭರತ್‌ ವಿಧಿವಶ

Share with

ಮಂಗಳೂರು: ನಗರದ ಪದವಿನಂಗಡಿಯ ಜನಸ್ನೇಹಿ ವೈದ್ಯ ಡಾ. ಭರತ್‌ ಅವರು ನಿಧನರಾಗಿದ್ದಾರೆ.

ಹಲವು ದಶಕಗಳಿಂದ ಪಚ್ಚನಾಡಿ, ಪದವಿನಂಗಡಿ, ಕಾವೂರು ಹಾಗೂ ಕೊಂಚಾಡಿ ಭಾಗದ ಸಾವಿರಾರು ರೋಗಿಗಳಿಗೆ ನಿಸ್ವಾರ್ಥ ವೈದ್ಯಕೀಯ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅತ್ಯಂತ ಆತ್ಮೀಯ ವೈದ್ಯರಾಗಿ ಗುರುತಿಸಿಕೊಂಡಿದ್ದರು. ಡಾ. ಭರತ್ ಅವರ ನಿಧನದಿಂದ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದ್ದು, ಅವರು ಕುಟುಂಬದವರು, ಅಪಾರ ಬಂಧು-ಬಳಗ, ಸ್ನೇಹಿತರು ಹಾಗೂ ಸಮಾಜದ ಬಂಧುಗಳನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *