ಮತ್ತೆ ಬಂತು ಕೆಬಿಸಿ, 18ನೇ ಸೀಸನ್ಗಾಗಿ ಕಿರುತೆರೆಗೆ ಮರಳಿದ ಅಮಿತಾಬ್ ಬಚ್ಚನ್

Share with

ಕೆಬಿಸಿ ಅಥವಾ ಕೌನ್ ಬನೇಗಾ ಕರೋಡ್ಪತಿ (Kaun Banega crorepati) ಭಾರತದ ಅತ್ಯಂತ ಹಳೆಯ ಟಿವಿ ರಿಯಾಲಿಟಿ ಶೋಗಳಲ್ಲಿ ಒಂದು. 26 ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್ಪತಿ ಮೊದಲ ಬಾರಿ ಪ್ರಸಾರಾಗಿತ್ತು. ಒಂದೇ ಒಂದು ಸೀಸನ್ ಹೊರತುಪಡಿಸಿ ಆಗಿನಿಂದಲೂ ಅಮಿತಾಬ್ ಬಚ್ಚನ್ ಅವರೇ ಈ ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ. 17 ಸೀಸನ್ಗಳನ್ನು ಮುಗಿಸಿರುವ ಈ ಶೋ ಇದೀಗ 18ನೇ ಸೀಸನ್ ಪ್ರಸಾರ ಆಗಲಿದ್ದು, ಅಮಿತಾಬ್ ಬಚ್ಚನ್ ಅವರು ಮತ್ತೊಮ್ಮೆ ನಿರೂಪಕರಾಗಿ ಕಿರುತೆರೆ ಮರಳಿದ್ದಾರೆ. 18ನೇ ಸೀಸನ್ನ ಪ್ರೊಮೊ ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಕೌನ್ ಬನೇಗಾ ಕರೋಡ್ಪತಿಯ 18ನೇ ಸೀಸನ್ನ ಪ್ರಸಾರ ದಿನಾಂಕವನ್ನು ಘೋಷಣೆ ಮಾಡುವ ಜೊತೆಗೆ ಈ ಬಾರಿಯ ಸೀಸನ್ನಲ್ಲಿ ಮಾಡಲಾಗಿರುವ ಕೆಲ ಬಲಾವಣೆಗಳ ಮಾಹಿತಿಯನ್ನು ಸಹ ಪ್ರೋಮೊನಲ್ಲಿ ಹಂಚಿಕೊಳ್ಳಲಾಗಿದೆ. 18ನೇ ಸೀಸನ್ನಲ್ಲಿ ಕೆಲವು ತಾಜಾ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಪ್ರೋಮೊನಲ್ಲಿ ಅಮಿತಾಬ್ ಬಚ್ಚನ್ ಅವರು ಹೇಳಿರುವಂತೆ, ಈ ಬಾರಿ ಕೇವಲ ಪ್ರಶ್ನೋತ್ತರ ಮಾತ್ರ ಇರುವುದಿಲ್ಲ. ಕೇಳುವ ಪ್ರಶ್ನೆಗೆ ಸ್ಪರ್ಧಿ ಉತ್ತರ ಕೊಟ್ಟರೆ ಮಾತ್ರವೇ ಸಾಕಾಗುವುದಿಲ್ಲ, ಅದಕ್ಕಾಗಿ ಆ ಸ್ಪರ್ಧಿ ಯೋಚನೆಯನ್ನೂ ಮಾಡಬೇಕಿರುತ್ತದೆ’ ಎಂದು ಬಚ್ಚನ್ ಅವರು ಪ್ರೋಮೊನಲ್ಲಿ ಹೇಳಿದ್ದಾರೆ.

ಕೌನ್ ಬನೇಗಾ ಕರೋಡ್ಪತಿ ಸೀಸನ್ 18 ಆಗಸ್ಟ್ 10ರಿಂದ ಪ್ರಸಾರ ಆರಂಭಿಸಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9 ಗಂಟೆಗೆ ಸೋನಿ ಎಂಟರ್ಟೈನ್ಮೆಂಟ್ನಲ್ಲಿ ಶೋ ಪ್ರಸಾರ ಆಗಲಿದೆ. ಸೋನಿ ಲಿವ್ ಒಟಿಟಿಯಲ್ಲಿಯೂ ಸಹ ಶೋ ಅನ್ನು ಲೈವ್ ಆಗಿ ಹಾಗೂ ರೆಕಾರ್ಡೆಡ್ ಶೋಗಳನ್ನು ಸಹ ವೀಕ್ಷಣೆ ಮಾಡಬಹುದಾಗಿದೆ.

2000 ರಲ್ಲಿ ಪ್ರಾರಂಭವಾದ ಕೌನ್ ಬನೇಗಾ ಕರೋಡ್ಪತಿ ಸತತ ಈಗ 18ನೇ ಸೀಸನ್ ಚಾಲ್ತಿಯಲ್ಲಿದೆ. ಇಂಗ್ಲೀಷ್ನ ‘ಹೂ ವಾಂಟ್ಸ್ ಟು ಬಿ ಎ ಮಿಲೇನಿಯರ್’ ಶೋನಿಂದ ಸ್ಪೂರ್ತಿ ಪಡೆದು ಈ ಶೋ ಪ್ರಾರಂಭ ಮಾಡಲಾಗಿತ್ತು. ಈ ವರೆಗೆ ಕೇವಲ ಒಮ್ಮೆ ಮಾತ್ರ ಅಮಿತಾಬ್ ಬಚ್ಚನ್ ಬದಲಿಗೆ ಬೇರೊಬ್ಬರು ನಿರೂಪಣೆ ಮಾಡಿದ್ದಾರೆ. 2007 ರಲ್ಲಿ ಒಂದು ಸೀಸನ್ ಮಾತ್ರ ಅಮಿತಾಬ್ ಬಚ್ಚನ್ ಬದಲಿಗೆ ಶಾರುಖ್ ಖಾನ್ ಅವರು ಈ ಶೋ ಹೋಸ್ಟ್ ಮಾಡಿದ್ದರು.


Share with

Leave a Reply

Your email address will not be published. Required fields are marked *