ಬೆಂಗಳೂರು: ‘ಬಿಗ್ ಬಾಸ್’ ಮನೆಯಿಂದ ವಾರದ ಮಧ್ಯದಲ್ಲೇ ಶಾಕಿಂಗ್ ಎಲಿಮಿನೇಷನ್ ನಡೆದಿದೆ. ರಾತ್ರೋರಾತ್ರಿ ಮನೆಯಿಂದ ಒಬ್ಬರು ಆಚೆ ಬಂದಿದ್ದಾರೆ.
ಕಳೆದ ವಾರ ‘ದೊಸ್ಮನೆ’ಯಿಂದ ಯಾರು ಎಲಿಮಿನೇಟ್ ಆಗಿರಲಿಲ್ಲ. ಈಗ ವಾರದ ಮಧ್ಯದಲ್ಲೇ ಒಬ್ಬರು ಆಚೆ ಬಂದಿದ್ದಾರೆ.
ಮಿಡ್ ವೀಕ್ ವಿಲಿಮಿನೇಷನ್ ಪ್ರಕ್ರಿಯೆ ಶಾಕಿಂಗ್ ಆಗಿರುತ್ತದೆ. ನಿರೀಕ್ಷೆ ಮಾಡದೇ ಇರುವವರು ಕೂಡ ಎಲಿಮಿನೇಟ್ ಆಗುವ ಚಾನ್ಸ್ ಇರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯಂತೆ ಈ ವಾರ ಬಿಗ್ ಬಾಸ್ ಮನೆಯಿಂದ ಒಬ್ಬ ಪ್ರಬಲ ಸ್ಪರ್ಧಿ ಹೊರಬಂದಿದ್ದಾರೆ.
ಎಲಿಮಿನೇಷನ್ ಪ್ರಕ್ರಿಯೆಯಿಂದ ಪಾರಾಗುವ ನಿಟ್ಟಿನಲ್ಲಿ ಅಡ್ವಂಟೇಜ್ ಪಡೆದ ಸ್ಪರ್ಧಿಗಳು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಒಬ್ಬರು ಅನಿರೀಕ್ಷಿತವಾಗಿ ‘ದೊಡ್ಮಿನೆ’ಯಾನವನ್ನು ಮುಗಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಲಿಖಿತ್ ಹಾಗೂ ತಾಂಡವ್ ರಾಮ್ ಅವರ ಪೈಕಿ ಒಬ್ಬರು ಹೋಗುತ್ತಾರೆ ಎನ್ನಲಾಗುತ್ತಿದೆ.

ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಸೋಶಿಯಲ್ ಮೀಡಿಯಾ ಟ್ರೆಂಡ್ಸ್ ಇವರಿಬ್ಬರ ಪೈಕಿ ತಾಂಡವ್ ರಾಮ್ ಅವರು ಎಲಿಮಿನೇಟ್ ಆಗಲಿದ್ದಾರೆ. ವಾರದ ಮಧ್ಯೆಯೇ ತಾಂಡವ್ ಔಟ್ ಆಗಿದ್ದಾರೆ ಎನ್ನಲಾಗಿದೆ.
ಟಾಕ್ – ಟಾಸ್ಕ್ ಎರಡರಲ್ಲೂ ಮೋಡಿ ಮಾಡಿರುವ ತಾಂಡವ್ ರಾಮ್ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನು ವೀಕ್ಷಕರಿಗೆ ನಂಬಲು ಆಗುತ್ತಿಲ್ಲ. ಟಫ್ ಸ್ಪರ್ಧಿಯನ್ನು ಯಾವ ಅಧಾರದ ಮೇಲೆ ಎಲಿಮಿನೇಟ್ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.




