Kasaragod: ವರ್ಷದಲ್ಲಿ 5,303 ಮಂದಿಗೆ ನಾಯಿ ಕಡಿತ

Share with

ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ನಾಯಿಗಳ ಕಡಿತಕ್ಕೆ ಒಳಗಾಗಿ 5,303 ಮಂದಿ ಚಿಕಿತ್ಸೆ ಪಡೆದಿದ್ದಾರೆ. ರೇಬಿಸ್ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ವಿವಿಧ ಪ್ರಾಣಿಗಳ ಕಡಿತಕ್ಕೆ ಒಳಗಾಗಿ ಒಟ್ಟು 7,918 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಶೇಕಡಾ 99ರಷ್ಟು ಮಂದಿಗೆ ನಾಯಿ ಮತ್ತು ಬೆಕ್ಕುಗಳಿಂದಲೇ ರೇಬಿಸ್ ಸೋಂಕು ಉಂಟಾಗುತ್ತದೆ. ಕೋತಿ, ಅಳಿಲು, ನರಿ, ತೋಳ ಮೊದಲಾದ ಪ್ರಾಣಿಗಳಿಂದಲೂ ರೇಬಿಸ್ ಹರಡುವ ಸಾಧ್ಯತೆಯಿದೆ.

ಸಾಕು ನಾಯಿಗಳಿಗಿಂತ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೇ ಹೆಚ್ಚು. ನಗರ- ಗ್ರಾಮ ಭೇದವಿಲ್ಲದೆ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲೆ, ಆಸ್ಪತ್ರೆ, ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿಯೂ ನಾಯಿಗಳನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಜಿಲ್ಲಾ ಆಸ್ಪತ್ರೆಯ ಆವರಣದೊಳಗೆಯೇ ನಾಯಿ ಕಡಿತದ ಘಟನೆ ನಡೆದಿರುವುದೂ ವರದಿಯಾಗಿದೆ.

ಪ್ರಾಣಿಗಳೊಂದಿಗೆ ಗೆಳೆತನ: ಜಾಗ್ರತೆ

ಪ್ರಾಣಿಗಳೊಂದಿಗೆ ಒಡನಾಟದ ಬಳಿಕ ತಕ್ಷಣವೇ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛವಾಗಿ ತೊಳೆಯಬೇಕು. ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಪ್ರತಿರೋಧಕ ಲಸಿಕೆ ಕೊಡಿಸಬೇಕು. ಪ್ರಾಣಿಗಳನ್ನು ಮುಖಕ್ಕೆ ಮುಖ ಸೇರಿಸಿ ಮುದ್ದಾಡಬಾರದು. ಮುಖ ಅಥವಾ ತುಟಿಗಳನ್ನು ನೆಕ್ಕಲು ಅವುಗಳಿಗೆ ಅವಕಾಶ


Share with

Leave a Reply

Your email address will not be published. Required fields are marked *