ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಂಗಡಿಯಲ್ಲಿರುವ ಲಾಡ್ಜ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ 10 ವರ್ಷಗಳ ಬಳಿಕ ಬಂಧನಕ್ಕೊಳಗಾಗಿದ್ದಾನೆ.
ವಯನಾಡು ಜಿಲ್ಲೆಯ ನಿವಾಸಿ ಬಿಜು ಸಿ.ಜೆ. ಅಲಿಯಾಸ್ ಆಂಟನಿ ಬಿಜು (44)ನನ್ನು ಜಿಲ್ಲಾ ಪೊಲೀಸ್ ಮುಖ್ಯಸ್ಥರ ನೇತೃತ್ವದ ಸ್ಕ್ಯಾಡ್ ಸಹಾಯದಿಂದ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
2016ರಲ್ಲಿ ಘಟನೆ ನಡೆದಿತ್ತು. ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಆರೋಪಿಯನ್ನು ಅಂದೇ ಬಂಧಿಸಿದ್ದರು. ಬಳಿಕ ರಿಮಾಂಡ್ ಅವಧಿ ಮುಗಿದು ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ ತಲೆಮರೆಸಿಕೊಂಡು ಓಡಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.




