ಖಾಸಗಿ ಆಸ್ಪತ್ರೆಯ ಸ್ವಾಗತಕಾರಿಣಿ ನಾಪತ್ತೆ

Share with

ಕಾಸರಗೋಡು: ನಗರದ ಖಾಸಗಿ ಆಸ್ಪತ್ರೆಯ ಸ್ವಾಗತಕಾರಿಣಿ ನಾಪತ್ತೆಯಾಗಿದ್ದಾರೆ.

ಬೇಡಡ್ಕ ಪೊಲೀಸ್‌ ಠಾಣೆ ವ್ಯಾಪ್ತಿಯ ಕೊಳತ್ತೂರು ಕೊವ್ವಳವಳಪ್ಪು ಹೌಸ್‌ ನಿವಾಸಿ ನಂದನಾ (23) ನಾಪತ್ತೆಯಾಗಿರುವವರು.

ಸೋಮವಾರ ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ರಾತ್ರಿ ಕಳೆದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಂಬಂಧಿಕರ ಮನೆ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ.

ಬಳಿಕ ಯುವತಿಯ ತಂದೆ ಬೇಡಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.


Share with

Leave a Reply

Your email address will not be published. Required fields are marked *