ಪೈಲಟ್ ಸ್ಮಿತ್ ಮಚ್ಚಾರ್ ಚೇತರಿಕೆಗೆ ಕೇದಾರನಾಥ ಸೇರಿದಂತೆ ಹಲವು ಪುಣ್ಯ ಸ್ಥಳಗಳಲ್ಲಿ ವಿಶೇಷ ಪ್ರಾರ್ಥನೆ

Share with

ನವದೆಹಲಿ: ಫೈದುಬೈ ವಿಮಾನದಲ್ಲಿ ನಡೆದ ಸಂಭಾವ್ಯ ಆಕ್ರಮಣಕಾರಿ ದಾಳಿ ಹಾಗೂ ಹೈಜಾಕ್ ಯತ್ನವನ್ನು ತಡೆದು, ಸುಮಾರು 180 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಸಹ-ಪೈಲಟ್ ಹಠಾತ್ ದಾಳಿ ನಡೆಸಿದಾಗ, ಭೀಕರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಸ್ಮಿತ್ ಸಮಯಪ್ರಜ್ಞೆ ಮೆರೆದು ಕಾಕ್ ಪಿಟ್ ಬಾಗಿಲು ತೆರೆದು ಪ್ರಯಾಣಿಕರ ನೆರವಿನಿಂದ ಅನಾಹುತವನ್ನು ತಪ್ಪಿಸಿದರು. ಪ್ರಸ್ತುತ ಅವರಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ದೇಶಾದ್ಯಂತ ವಿಶೇಷ ಪೂಜೆ-ಪ್ರಾರ್ಥನೆ:

ಕ್ಯಾಪ್ಟನ್ ಮಚ್ಚಾರ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ದೇಶದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.

ಕಾಶಿಯ ವಿಶ್ವನಾಥ ಧಾಮ, ಕೇದಾರನಾಥ ಕ್ಷೇತ್ರ, ಗುಜರಾತಿನ ಸೋಮನಾಥ ದೇವಾಲಯ, ಇಂದೋರ್‌ನ ಖಜರಾನಾ ಗಣೇಶ ದೇವಾಲಯ ಹಾಗೂ ದೆಹಲಿಯ ಝಂಡೇವಾಲನ್‌ನಲ್ಲಿರುವ 108 ಅಡಿ ಎತ್ತರದ ಹನುಮಾನ್ ದೇವಾಲಯ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಪೂಜಾ ವಿಧಿವಿಧಾನಗಳನ್ನು ಆಯೋಜಿಸಲಾಗಿತ್ತು.

174 ಪ್ರಯಾಣಿಕರು ಹಾಗೂ 27 ಮಕ್ಕಳಿದ್ದ ಫೈದುಬೈ FZ1073 ವಿಮಾನದ 174 ಪ್ರಯಾಣಿಕರು ಹಾಗೂ 27 ಮಕ್ಕಳಿದ್ದ ಫೈದುಬೈ FZ1073 ವಿಮಾನದ ಕ್ಯಾಪ್ಟನ್ ಆಗಿದ್ದ ಮಚ್ಛಾರ್ ಅವರ ಮೇಲೆ ಸಹ ಪೈಲಟ್ ದಾಳಿ ನಡೆಸಿದ್ದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ವಿಮಾನವು 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಈ ಘಟನೆ ನಡೆದಿದ್ದು ಬಳಿಕ ಇದ್ದಕ್ಕಿದ್ದಂತೆ ತುರ್ತು ಸಂಕೇತಗಳನ್ನು ರವಾನಿಸಿ, 17,000 ಅಡಿಗಿಂತಲೂ ಹೆಚ್ಚು ಕೆಳಕ್ಕೆ ಧುಮುಕಿತ್ತು. ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಇತರ ಪೈಲಟ್ ಗಾಲ ಸಹಾಯದಿಂದ ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ಪ್ರಿನ್ಸ್‌ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಲಾಯಿತು.


Share with

Leave a Reply

Your email address will not be published. Required fields are marked *