ದಸರಾ ರಜೆಯ ಅವಧಿಯಲ್ಲಿ ವಿಶೇಷ ತರಗತಿ

Share with

ಮಂಗಳೂರು: ಮಳೆಯಿಂದಾಗಿ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಹೊಂದಾಣಿಕೆ ಮಾಡುವ ನಿಟ್ಟಿನಲ್ಲಿ, ಮುಂಬರುವ ದಸರಾ ರಜೆಯ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆಯು ಕೆಲವು ಶರತ್ತುಗಳೊಂದಿಗೆ ಅನುಮತಿ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ಜಿಲ್ಲಾ ಡಿಡಿಪಿಐ ಅ.3 ರಿಂದ ಅ.7 ರವರೆಗೆ ಮಳೆ ರಜೆ ಹೊಂದಾಣಿಕೆಗಾಗಿ ತರಗತಿಗಳನ್ನು ನಡೆಸಲು ಸಮ್ಮತಿಸಿದೆ. ಒಂದು ವೇಳೆ ಅ.3 ರಿಂದಲೇ ರಜೆ ಘೋಷಿಸುವ ಶಿಕ್ಷಣ ಸಂಸ್ಥೆಗಳು ಮಳೆ ರಜೆ ಹೊಂದಾಣಿಕೆಯನ್ನು ಶನಿವಾರ ಮಧ್ಯಾಹ್ನ ಬಳಿಕ ತರಗತಿ ಮೂಲಕ ಹೊಂದಿಸಬೇಕು.

ಅ.3 ರಿಂದ ತರಗತಿ ನಡೆಸಲು ಕೆಲವೊಂದು ನಿಬಂಧನೆಯನ್ನು ಶಿಕ್ಷಣ ಇಲಾಖೆ ಹಾಕಿದೆ. ಅದರಂತೆ, ತರಗತಿಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರಿಂದ ಕಡ್ಡಾಯವಾಗಿ ಲಿಖಿತ ಒಪ್ಪಿಗೆ ಪತ್ರವನ್ನು ಪಡೆದು ಶಾಲೆಯಲ್ಲಿ ಕಾಯ್ದಿರಿಸಬೇಕು. ಎಸ್‌ಡಿಎಂಸಿ ಸಭೆ ನಡೆಸಿ, ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು ಈ ಕುರಿತು ನಡವಳಿ ದಾಖಲಿಸಬೇಕು. ಕೈಗೊಂಡ ಕ್ರಮಗಳು ಹಾಗೂ ತರಗತಿ ನಡೆಸುತ್ತಿರುವ ವಿವರಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.


Share with

Leave a Reply

Your email address will not be published. Required fields are marked *