ಬೆಂಗಳೂರು: ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮೀ, ಕುಟುಂಬ ಸದಸ್ಯರ ಕುರಿತು ದುರುದ್ದೇಶಪೂರಿತ ಮತ್ತು ಅವಹೇಳನಾಕಾರಿ ಹೇಳಿಕೆ ನೀಡದಂತೆ ನಟ ಧನ್ನೀರ್ ಅಥವಾ ಅವರ ಬೆಂಬಲಿಗರ ವಿರುದ್ಧ 12ನೇ ಸಿಸಿಎಚ್ ಕೋರ್ಟ್ ಮಧ್ಯಂತರ ಪ್ರತಿಬಂಧಕಾಜ್ಞೆ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸೇರಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವೈಯಕ್ತಿಕ, ಖಾಸಗಿ, ಹಣಕಾಸು ಮತ್ತು ಪ್ರಕರಣದಲ್ಲಿ ಕಾನೂನು ಸಮಸ್ಯೆಗಳ ಬಗ್ಗೆ ಯಾವುದೇ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆ ನೀಡಬಾರದು ಎಂದು ನಟ ಧನ್ನೀರ್ ವಿರುದ್ಧ ಪ್ರತಿಬಂಧಕ ಆದೇಶ ನೀಡಬೇಕು ಎಂದು ದರ್ಶನ್ ದಂಪತಿ ಕೋರ್ಟ್ ಮೊರೆ ಹೋಗಿದ್ದರು.
ಈ ಸಂಬಂಧ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಧನ್ವಿರ್ ಅಥವಾ ಅವರ ಬೆಂಬಲಿಗರು ದರ್ಶನ್, ಅವರ ಪತ್ನಿ ವಿರುದ್ಧ ಯಾವುದೇ ಸುದ್ದಿ ವಾಹಿನಿ, ಮಾಧ್ಯಮಗಳಲ್ಲಿ ಮಾತನಾಡಬಾರದು ಎಂದು ಏಕಪಕ್ಷೀಯ ಮಧ್ಯಂತರ ಆದೇಶ ಮಾಡಿದೆ. ಅಲ್ಲದೇ, ಧನ್ವಿರ್ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.7ಕ್ಕೆ ಮುಂದೂಡಿದೆ.




