ವಿಧಾನಸಭಾ ಚುನಾವಣಾ ಡೀಲ್; ಟಿಕೆಟ್ ಗಾಗಿ ಹಣ ಪಡೆದು ವಂಚಿಸಿದ ಆರೋಪ: ಪುತ್ತಿಲ ಪರಿವಾರದ ಸ್ಪಷ್ಟನೆ

Share with

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ತೆಗೆಸಿಕೊಡುವುದಾಗಿ ನಂಬಿಸಿ ಹಣ ಪಡೆದು 2 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದು ಪಿಡಬ್ಲ್ಯೂಡಿ ನಿವೃತ್ತ ಅಭಿಯಂತರೋರ್ವರಿಗೆ ಪುತ್ತೂರಿನ ಪುತ್ತಿಲ ಪರಿವಾರದ ವ್ಯಕ್ತಿಯೋರ್ವರು ವಂಚಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗೆ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರ ಸ್ಪಷ್ಟನೆ ನೀಡಿದೆ.

ಪುತ್ತಿಲ ಪರಿವಾರದ ಸ್ಪಷ್ಟನೆ

2023ರ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಯದಂತೆ ಪಕ್ಷೇತರರಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರು ಸ್ಪರ್ಧಿಸಿದರು.

ಚುನಾವಣೆಯ ಸಂದರ್ಭ ಕೇವಲ 20 ದಿನದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ದುಡಿದಿರುವವರಲ್ಲಿ ನೇರಳಕಟ್ಟೆಯ ರಾಜಶೇಖರ್ ಕೋಟ್ಯಾನ್ ಕೂಡ ಓರ್ವರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಜಶೇಖರ್ ಕೋಟ್ಯಾನ್ ವಿರುದ್ಧ ಕೆಲವು ಆರೋಪಗಳು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ವಿಷಯ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಕ್ಷೇತ್ರದ ರಾಷ್ಟ್ರೀಯ ಪಕ್ಷದ ಟಿಕೇಟ್ ವಿಷಯದಲ್ಲಿ ನಾಯಕರ ನಡುವೆ ಚುನಾವಣ ಪೂರ್ವ ವ್ಯವಹಾರವಾಗಿದ್ದು, ಆ ಆರೋಪದಲ್ಲಿ ಪುತ್ತಿಲ ಪರಿವಾರದ ಹೆಸರು ಪ್ರಸ್ತಾಪವಾಗಿರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇವೆ.

ಸಾಮಾಜಿಕ ಜಾಲತಾಣದಲ್ಲಿ ಬಂದ ದೂರಿನ ಪ್ರತಿಯಲ್ಲಿಯೂ ಪುತ್ತಿಲ ಪರಿವಾರದ ಬಗ್ಗೆ ಉಲ್ಲೇಖವಿಲ್ಲ.

ಅವರ ವೈಯಕ್ತಿಕ ವ್ಯವಹಾರಕ್ಕೂ ನಮ್ಮ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಸ್ಪಷ್ಟನೆಯನ್ನು ಮಾಧ್ಯಮದ ಮುಖಾಂತರ ನೀಡುತ್ತಿದ್ದೇವೆ.


Share with

Leave a Reply

Your email address will not be published. Required fields are marked *