ಬಂಟ್ವಾಳ: ತೀವ್ರ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಕ್ಕಾಜೆಯ ಏಳು ವರ್ಷದ ಪುಟ್ಟ ಬಾಲಕಿಯೊಬ್ಬಳು ಕೋಮಾಕ್ಕೆ ತಲುಪಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತಪಟ್ಟ ಬಾಲಕಿಯನ್ನು ಎಸ್ಸೆಸ್ಸೆಫ್ ಮಾಜಿ ಅಧ್ಯಕ್ಷರೂ, ಹೆಜಮಾಡಿ ಕೋಡಿ ಮಾಜಿ ಮುಅಲ್ಲಿಮರೂ ಆಗಿರುವ ಶರೀಪ್ ಝೈನಿ ಬೊಳ್ಳಾಯಿರವರ ಮಗಳು ಸಲ್ಮಾ ನಷೀದಾ ಎಂದು ಗುರುತಿಸಲಾಗಿದೆ.