ಪುತ್ತೂರು: ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದೀಕ್ ನೀರಾಜೆ ಸಹಿತ 10 ಮಂದಿಗೆ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

Share with

ಪುತ್ತೂರು: ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಮಂದಿ ಸಾಧಕರನ್ನು ಗುರುತಿಸಿ ಅವರಿಗೆ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಶಿವಶಂಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ದಿನಾಚರಣೆ.

ಡಾ.ಸುಬ್ರಾಯ ಭಟ್(ವೈದ್ಯಕೀಯ), ಎ.ಪಿ. ನಾರಾಯಣ ಮರಿಕೆ(ಕೃಷಿ), ನಿರ್ಮಲಾ ಸುರತ್ಕಲ್ (ಸಾಹಿತ್ಯ), ನಾರಾಯಣ ಕೆ(ಶಿಕ್ಷಣ), ದಯಾನಂದ ರೈ ಕೋರ್ಮಂಡ(ಕ್ರೀಡೆ), ಸುಂದರ ರೈ ಮಂದಾರ(ರಂಗಭೂಮಿ), ರೆ.ವಿಜಯ್ ಹಾರ್ವಿನ್‌(ಶಿಕ್ಷಣ- ಸಮನ್ವಯ), ಡಾ.ಅಜಯ್(ಸಮಾಜ ಸೇವೆ), ನಾರಾಯಣ ಕುಂಬ್ರ(ಸಾಹಿತ್ಯ ಸಂಘಟನೆ) ಮತ್ತು ಸಿದ್ದೀಕ್ ನೀರಾಜೆ (ಪತ್ರಿಕೋದ್ಯಮ) ಅವರನ್ನು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


Share with

Leave a Reply

Your email address will not be published. Required fields are marked *