ಉಡುಪಿ: ಬಾಲಕಿಯೋರ್ವಳು ವಸತಿ ಸಮುಚ್ಚಯದ ಟೆರೇಸ್‌ನಿಂದ ಬಿದ್ದು ಮೃತಪಟ್ಟ ಘಟನೆ ಭಾನುವಾರ ಮಣಿಪಾಲದ ಹೆರ್ಗ ಗ್ರಾಮದ ಸರಳೇಬೆಟ್ಟುವಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.


ಮೃತ ಬಾಲಕಿಯನ್ನು ಪ್ರಜ್ಞಾ (13) ಎಂದು ಗುರುತಿಸಲಾಗಿದ್ದು, ವಸತಿ ಸಮುಚ್ಚಯದ ಮಹಡಿಯಿಂದ ಬಿದ್ದ ಪ್ರಜ್ಞಾಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೀವನದಲ್ಲಿ ಜಿಗುಪ್ಸೆಯಿಂದಗೊಂಡು ಪ್ರಜ್ಞಾ ಎಂಟನೇ ಮಹಡಿಯ ಬಾಲ್ಕನಿಯಿಂದ ಹಾರಿದರೆನ್ನಲಾಗಿದೆ.




