ಶೆಡ್ ನಿಂದ ಹಿಂದಕ್ಕೆ ಚಲಾಯಿಸಿದ ಕಾರಿನಡಿಗೆ ಸಿಲುಕಿ ಮಗು ಮೃತ್ಯು

Share with

ಉಪ್ಪಳ: ಶೆಡ್ಡಿನಿಂದ ಕಾರನ್ನು ಹಿಂದಕ್ಕೆ ತೆಗೆಯುವ ವೇಳೆ ಒಂದುವರೆ ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.

ನಿಸಾರ್ ರವರ ಒಂದೂವರೆ ವರ್ಷದ ಮಗು ಮಸ್ತು ಜಾಸಿದ್.

ಉಪ್ಪಳ ಬಳಿಯ ಕೊಡಂಗೆ ರಸ್ತೆಯ ಕೂಡಂ ಬೈಲು ನಿವಾಸಿ ನಿಸಾರ್ ರವರ ಒಂದೂವರೆ ವರ್ಷದ ಮಸ್ತು ಜಾಸಿದ್ ಮೃತಪಟ್ಟ ಧಾರುಣ ಘಟನೆ ನಡೆದಿದೆ ನ.12ರಂದು ಸಂಜೆ 4:30 ವೇಳೆ ಮಗುವಿನ ಚಿಕ್ಕಪ್ಪ ತೌಸೀಫ್ ಶೆಡ್ಡಿನಿಂದ ಕಾರನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಹಿಂಬದಿಯಲ್ಲಿ ಮಗು ನಿಂತಿದ್ದೆನ್ನಲಾಗಿದೆ ಈ ಬಗ್ಗೆ ತಿಳಿಯದೆ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಮಗು ಅದರಡಿ ಸಿಲುಕಿ ಗಂಭೀರ ಗಾಯಗೊಂಡಿದ್ದು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದೆ. ಮೃತ ಮಗುವಿನ ತಂದೆ, ತಾಯಿ, ಸಹೋದರ ಹಾಗೂ ಬಂಧುಗಳನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *