ಮಂಗಳೂರು: ಪೆರ್ಮನ್ನೂರು ಗ್ರಾಮದ ಸಂತೋಷನಗರ ಸಾರ್ವಜನಿಕ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತುವಾದ ಮೆಥಾಂಫೆಟಮೈನ್ (Methamphetamine) ಮತ್ತು ಎಲ್‌ಎಸ್‌ಡಿ ಸ್ಟ್ಯಾಂಪ್ ಡ್ರಗ್ಸ್ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅರೋಪಿಗಳನ್ನು ಶಿಶಿರ ದೇವಾಡಿಗ ಹಾಗೂ ಶುಶಾನ್ ಎಲ್ ಎಂದು ಗುರುತಿಸಲಾಗಿದೆ. ಆರೋಪಿಗಳು ಪೆರ್ಮನ್ನೂರು ಗ್ರಾಮದ ಸಂತೋಷನಗರದ ಸಾರ್ವಜನಿಕ ರಸ್ತೆ ಬದಿಯಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ ಸುಮಾರು 132 ಗ್ರಾಮ್ ತೂಕದ ಮೆಥಾಂಫೆಟಮೈನ್ ಡ್ರಗ್ಸ್ ಮತ್ತು 250 ಎಲ್‌ಎಸ್‌ಡಿ ಸ್ಟ್ಯಾಂಪ್ ಡ್ರಗ್ಸ್, ನಗದು ಹಣ 3,70,050 ರೂಪಾಯಿ ಹಾಗೂ ಸ್ವಿಪ್ಟ್ ಕಾರು ಸೇರಿದಂತೆ ಒಟ್ಟು 14,01,050 ರೂಪಾಯಿ ಸೊತ್ತುಗಳನ್ನು ವಶಪಡಿಸಲಾಗಿದೆ.
ಈ ಕಾರ್ಯಚರಣೆಯಲ್ಲಿ ಧನ್ಯ ಎನ್ ನಾಯಕ್ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪವಿಭಾಗದವರ ನೇತೃತ್ವದಲ್ಲಿ Anti-Drug Team ಪಿಎಸ್‌ಐ ಪುನಿತ್ ಗಾಂವ್‌ಕರ್, ಉಳ್ಳಾಲ ಠಾಣಾ ಪಿಎಸ್‌ಐ ಸಂತೋಷಕುಮಾರ್.ಡಿ ಹಾಗೂ ಸಿಬ್ಬಂದಿಗಳಾದ ಸಾಜು ನಾಯರ್, ಮಹೇಶ್ ಕುಮಾರ್, ಶಿವಕುಮಾರ್ ಮತ್ತು ಅಕ್ಬರ್ ಯಡ್ರಾಮಿರವರು ಪಾಲ್ಗೊಂಡಿದ್ದರು.