ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಇದರ ಸದಸ್ಯರಾದ ಕೊಯಿಲ ಗ್ರಾಮದ ನಿವಾಸಿ ದೇವಕಿ ಅವರ ಹೋಟೆಲ್ ಗೆ ಸಿಡಿಲು ಬಡಿದು ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಹಾನಿಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಸಹಾಯಧನವನ್ನು ಯೋಜನಾಧಿಕಾರಿಗಳಾದ ಮಾದವ ಗೌಡರವರು ಸಂಘದ ಸದಸ್ಯರಾದ ಶ್ರೀಮತಿ ದೇವಕಿ ಅವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರು, ಸೇವಾ ಪ್ರತಿನಿಧಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.