ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಆಟೋ ರಿಕ್ಷಾ

Share with

ವಿಟ್ಲ: ವಿಟ್ಲ-ಕಾಸರಗೋಡು ರಸ್ತೆಯ ಕಾಶೀಮಠ ಎಂಬಲ್ಲಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಘಟನೆ ಡಿ.6ರಂದು ಬೆಳಗ್ಗೆ ನಡೆದಿದೆ.

ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಆಟೋ ರಿಕ್ಷಾ.

ಕಾಶೀಮಠ ರಸ್ತೆ ತಿರುವಿನಲ್ಲಿ ಏಕಾಏಕಿಯಾಗಿ ಕಾರೊಂದು ಹಿಮ್ಮುಖವಾಗಿ ಚಲಿಸಿ ಬಂದ ಕಾರಣ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ. ಇದರಿಂದ ಆಟೋ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *