ಮೂಲ್ಕಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಲಾರಿ

Share with

ಮೂಲ್ಕಿ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹೆದ್ದಾರಿ ಬಿಟ್ಟು ಡಿವೈಡರ್ ಮೇಲೇರಿ ಸರ್ವಿಸ್ ರಸ್ತೆಗಿಳಿದು ಪೊಲೀಸ್ ಸಿಬ್ಬಂದಿ, ಸ್ಕೂಟರ್ ಹಾಗೂ ಆಟೋ ಗೆ ಡಿಕ್ಕಿ ಹೊಡೆದ ಘಟನೆ ರಾ.ಹೆದ್ದಾರಿ 66ರ ಮೂಲ್ಕಿ ಜಂಕ್ಷನ್‌ ಬಳಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹೆದ್ದಾರಿ ಬಿಟ್ಟು ಡಿವೈಡರ್ ಮೇಲೇರಿದೆ.

ಲಾರಿ ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಈ ಘಟನೆಯಲ್ಲಿ ಸ್ಕೂಟರ್‌ ಸವಾರ, ಬಪ್ಪನಾಡು ಬಳಿಯ ರೆಸಿಡೆನ್ಸಿಯೊಂದರ ವಾಚ್ ಮ್ಯಾನ್, ಉತ್ತರ ಕರ್ನಾಟಕ ಮೂಲದ ಸಂಗಪ್ಪ(57) ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿ ಗೀತಾ ಹಾಗೂ ಆಟೋ ಚಾಲಕ ಧರ್ಮೇಂದ್ರ ಗಾಯಗೊಂಡು ಮುಲ್ಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ವೇಗದಿಂದ ಬರುತ್ತಿದ್ದ ಲಾರಿಯು ಹೆದ್ದಾರಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿಕೇಡ್‌ ಗಳನ್ನು ತಪ್ಪಿಸಲು ಯತ್ನಿಸಿ, ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಈ ಘಟನೆಯಿಂದ ಮೂವರಿಗೆ ಅಪಫಾತವಾಗಿದ್ದು, ಸ್ಕೂಟರ್‌ ಸವಾರನಿಗೆ ಗಂಭೀರ ಗಾಯವಾಗಿದ್ದು, ಉಳಿದಿಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಕೂಟರ್‌ ಹಾಗೂ ಆಟೋ ರಿಕ್ಷಾಕ್ಕೆ ಹಾನಿಯಾಗಿದೆ.

ಇದೇ ಸಂದರ್ಭ ಸರ್ವಿಸ್‌ ರಸ್ತೆ ಬದಿ ಕುಳಿತಿದ್ದ ಕೂಲಿ ಕಾರ್ಮಿಕರು ಜೀವ ಭಯದಿಂದ ಓಡಿ ಅನಾಹುತದಿಂದ ಪಾರಾಗಿದ್ದಾರೆ. ಈ ದೃಶ್ಯ ಸ್ಥಳೀಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ.

ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್‌ ಪೊಲೀಸರು, ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share with

Leave a Reply

Your email address will not be published. Required fields are marked *