ಫರಂಗಿಪೇಟೆ: ಬೈಕ್‌ ಗೆ ಬಸ್ ಡಿಕ್ಕಿ: ಬೈಕ್‌ ಸವಾರ ಮೃತ್ಯು

Share with

ಫರಂಗಿಪೇಟೆ: ಅರ್ಕುಳ ದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ ಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ ಸವಾರ ಮೃತಪಟ್ಟ ಘಟನೆ ಡಿ.24ರಂದು ಬೆಳಿಗ್ಗೆ ನಡೆದಿದೆ.

ಅರ್ಕುಳ ದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ ಗೆ ಬಸ್ಸೊಂದು ಡಿಕ್ಕಿ

ಮೃತಪಟ್ಟ ವ್ಯಕ್ತಿಯನ್ನು ಕುಕ್ಕಾಜೆ ನಿವಾಸಿ ಹಂಝ ಯಾನೆ ರಮ್ಲಾನ್ ಎಂದು ಗುರುತಿಸಲಾಗಿದ್ದು, ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಬೈಕ್‌ ಸವಾರ ರಮ್ಲಾನ್ ಮೃತಪಟ್ಟರು ಎಂದು ವರದಿಯಾಗಿದೆ.

ಬೈಕ್ ನ ಹಿಂಬದಿಯಲ್ಲಿದ್ದ ರಮ್ಲಾನ್ ಅವರ ಪತ್ನಿ ಮತ್ತು ಮಗು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *