ಉಪ್ಪಳ: ಅಯೋಧ್ಯೆಯ ಮಂತ್ರಾಕ್ಷತೆ ಮಂಗಲ್ಪಾಡಿ ಗ್ರಾಮಗಳಿಗೆ ವಿತರಣೆ

Share with

ಉಪ್ಪಳ: ಅಯೋಧ್ಯ ಪ್ರಾಣ ಪ್ರತಿಷ್ಠೆಕಾರ್ಯಕ್ರಮದ ಅಂಗವಾಗಿ ಮಂಗಲ್ಪಾಡಿ ಪಂಚಾಯತಿನ 23 ಗ್ರಾಮಗಳಿಗೆ ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.28ರಂದು ಸಂಜೆ ನಡೆಯಿತು.

ಮಂಗಲ್ಪಾಡಿ ಪಂಚಾಯತಿನ 23 ಗ್ರಾಮಗಳಿಗೆ ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಜೀತೆಂದ್ರ ಪ್ರತಾಪನಗರ ಮಂತ್ರಾಕ್ಷತೆಯ ಬಗ್ಗೆ ವಿವರಣೆಯನ್ನು ನೀಡೀದರು. ವೇದಿಕೆಯಲ್ಲಿ ಹಿರಿಯ ಕೃಷಿಕರು, ಮಹಾಲಿಂಗೇಶ್ವರ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಪತ್ವಾಡಿ ಮತ್ತು ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷರು ಹಾಗೂ ವಿಶ್ವ ಹಿಂದೂ ಪರಿಷದ್ ಮಂಗಲ್ಪಾಡಿ ಖಂಡ ಸಮಿತಿ ಅಧ್ಯಕ್ಷ ಹರಿನಾಥ ಭಂಡಾರಿ ಮುಳಿಂಜ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಮಂತ್ರಾಕ್ಷತೆ ಇರುವ ಕಲಶಗಳಿಗೆ ಕ್ಷೇತ್ರದ ಅರ್ಚಕರು ಆರತಿ ಬೆಳಗಿದ ಬಳಿಕ ಎಲ್ಲಾ ಗ್ರಾಮಗಳಿಗೆ ವಿತರಿಸಲಾಯಿತು. ರಘು.ಸಿ ಚೆರುಗೋಳಿ ಸ್ವಾಗತಿಸಿ, ಶ್ರೀಧರ ಶೆಟ್ಟಿ ಪರಂಕಿಲ ವಂದಿಸಿದರು.


Share with

Leave a Reply

Your email address will not be published. Required fields are marked *