ಸಿಮೆಂಟ್ ಲಾರಿ ಟೈರ್ ಸಿಡಿದು ಪಲ್ಟಿ; ಸಂಚಾರ ವ್ಯತ್ಯಯ

Share with


ಸಕಲೇಶಪುರ: ತಾಲ್ಲೂಕಿನ ಗುಲಗಳಲೆಯ ಬಳಿ ಚಲಿಸುತ್ತಿದ್ದ ಸಿಮೆಂಟ್ ಲಾರಿಯ ಟೈರ್ ಏಕಾಏಕಿ ಸಿಡಿದ ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಘಟನೆಯಿಂದಾಗಿ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಲಾರಿ ಪಲ್ಟಿಯಾದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತಿಳಿದುಬರಬೇಕಿದೆ.


Share with

Tags:

Leave a Reply

Your email address will not be published. Required fields are marked *