ಕುಶಾಲನಗರದಲ್ಲಿ ಭಾರೀ ಮಳೆ; ಹಲವೆಡೆ ಅನಾಹುತ

Share with

ಕುಶಾಲನಗರ: ಕುಶಾಲನಗರ ತಾಲೂಕಿನಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಅನಾಹುತ ಸಂಭವಿಸಿವೆ.

ಕೊಡಗು ಗಡಿ ಭಾಗದಲ್ಲಿರುವ ಕ್ರೈಸ್ತರ ಚಿರಶಾಂತಿಧಾಮದ ತಡೆಗೋಡೆ ಕುಸಿದು ಸಂಪೂರ್ಣ ಜಲಾವೃತವಾಗಿದೆ. ಮಾದಾಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಂಗಡಿ ಮುಂಗಟ್ಟು ಹಾಗೂ ಮನೆಗಳಿಗೆ ಮಳೆ ನೀರು ನುಗ್ಗಿ ತೊಂದರೆಯಾಗಿದೆ. ಕುಶಾಲನಗರದ ಸಾಯಿ ಬಡಾವಣೆ ರಸ್ತೆ ಬದಿ ಕುಸಿದಿದೆ.

ಕೂಡುಮಗಳೂರು ಗ್ರಾಮದ ಜಯಲಕ್ಷ್ಮಿ ಅವರ ಮನೆಯ ಮೇಲ್ಬಾವಣಿ ಹಾಗೂ ರಂಗಸಮುದ್ರ ಗ್ರಾಮದ ನವೀನ್ ಅವರ ಕೊಟ್ಟಿಗೆ ಹಾನಿಗೀಡಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಮಳೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಕಂಡುಬಂದ ಹಿನ್ನೆಲೆ ಹೆದ್ದಾರಿ ಪ್ರಾಧಿಕಾರವು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್‌ ಜಾರಿ ಮಾಡಿದೆ.


Share with

Leave a Reply

Your email address will not be published. Required fields are marked *