ತ್ರಿಶಾ ಮೇಲೆ ಕ್ರಷ್ ಇತ್ತು.. ಈಗ ಇಲ್ಲ.. ವೈರಲ್ ಆಯ್ತು ನಟನ ಹೇಳಿಕೆ..!

Share with

ಕೊಚ್ಚಿ: ಮಲಯಾಳಂ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ಬಾಸಿಲ್ ಜೋಸೆಫ್ (Basil Joseph) ಇತ್ತೀಚೆಗೆ ನೀಡಿದ ಸಂದರ್ಶನವೊಂದು ಈಗ ತಮಿಳು ಮತ್ತು ಮಲಯಾಳಂ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಹೊಸ ಸಿನಿಮಾದ ಪ್ರಚಾರದ ಅಂಗವಾಗಿ ತಮಿಳು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬಾಸಿಲ್ ತಮ್ಮ ಸೆಲೆಬ್ರಿಟಿ ಕ್ರಶ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಬಾಸಿಲ್‌ ಅವರ ‘ಅತಿರಡಿ’ ಚಿತ್ರ ಇತ್ತೀಚೆಗೆ ರಿಲೀಸ್ ಆಗಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ನಡುವೆ ಸಂದರ್ಶನವೊಂದರಲ್ಲಿ ಅವರು ತಮ್ಮ ಸೆಲೆಬ್ರಿಟಿ ಕ್ರಶ್ ಬಗ್ಗೆ ಮಾತನಾಡಿರುವುದು ವೈರಲ್ ಆಗಿದೆ.

ಸಂದರ್ಶನದಲ್ಲಿ ನಿಮ್ಮ ನೆಚ್ಚಿನ ನಟಿ ಯಾರು ಎಂಬ ಪ್ರಶ್ನೆಗೆ ಬಾಸಿಲ್ ನೇರವಾಗಿ ಉತ್ತರಿಸುವ ಬದಲು ಸ್ವಲ್ಪ ವಿವರಣೆ ಕೊಡುತ್ತಾ ಅವರು ಮಾತನಾಡಿದ್ದಾರೆ.

“ಇದನ್ನು ಈಗ ಹೇಳಬಹುದೇ ಎಂದು ನನಗೆ ತಿಳಿದಿಲ್ಲ, ಹೇಳಿದರೆ ಸಮಸ್ಯೆಯಾಗುತ್ತದೆಯೇ ಎಂದೂ ಗೊತ್ತಿಲ್ಲ” ಎಂದು ತಮಾಷೆಯಾಗಿ ಪೀಠಿಕೆ ಹಾಕಿದ ಬಾಸಿಲ್, ನಂತರ ತಮಗೆ ನಟಿ ತ್ರಿಶಾ ಕೃಷ್ಣನ್ ಮೇಲೆ ಕ್ರಶ್ ಇತ್ತು ಎಂದು ಬಹಿರಂಗಪಡಿಸಿದರು.

ತಮ್ಮ ಎಂದಿನ ನಗುವಿನ ಶೈಲಿಯಲ್ಲೇ ಈ ವಿಷಯ ಹಂಚಿಕೊಂಡ ಬಾಸಿಲ್, “ಆದರೆ ಈಗ ಆ ಕ್ರಶ್ ಇಲ್ಲ” ಎಂದು ಸ್ಪಷ್ಟಪಡಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಚರ್ಚೆಗೆ ಕಾರಣವಾದ ಟೈಮಿಂಗ್..

ಪ್ರಸ್ತುತ ತಮಿಳುನಾಡಿನ ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ತ್ರಿಷಾ ಅವರ ಹೆಸರು ಸಖತ್ ಸುದ್ದಿಯಲ್ಲಿದೆ. ವಿಶೇಷವಾಗಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರೊಂದಿಗೆ ತ್ರಿಶಾ ಹೆಸರು ತಳುಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಬಾಸಿಲ್ ಅವರ ಈ ಹಳೆಯ ಕ್ರಶ್ ವಿಚಾರ ಈಗ ಹೆಚ್ಚು ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ತ್ರಿಶಾ ಮತ್ತು ವಿಜಯ್ ಅವರ ಆಪ್ತ ಗೆಳೆಯರು ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಈ ವದಂತಿಗಳಿಗೆ ಪುಷ್ಟಿ ನೀಡುತ್ತಿವೆ.

ತ್ರಿಶಾ ಕಾಲೆಳೆದಿದ್ದ ನಟ ಧ್ಯಾನ್ ಶ್ರೀನಿವಾಸನ್‌:

ಬಾಸಿಲ್ ಜೋಸೆಫ್ ಮಾತ್ರವಲ್ಲದೆ, ಇತ್ತೀಚೆಗೆ ಮಲಯಾಳಂನ ಮತ್ತೊಬ್ಬ ನಟ ಧ್ಯಾನ್ ಶ್ರೀನಿವಾಸನ್ ಕೂಡ ತ್ರಿಶಾ ಬಗ್ಗೆ ಹಾಸ್ಯ ಮಾಡಿದ್ದರು.

ಯುಜಿಸಿ ಗೋಲ್ಡ್ ಲೋನ್ ಕಾರ್ಯಕ್ರಮವೊಂದರಲ್ಲಿ ಬ್ರಾಂಡ್‌ ಅಂಬಾಸಿಡ‌ರ್ ಆಗಿದ್ದ ತ್ರಿಶಾ ಗೈರಾಗಿದ್ದರು. ಈ ವೇಳೆ ಧ್ಯಾನ್ “ಇಂದು ವಿಜಯ್ ಅವರ ಚುನಾವಣಾ ಫಲಿತಾಂಶದ ದಿನವಲ್ಲವೇ? ಹಾಗಾಗಿ ತ್ರಿಶಾ ಅವರಿಗೆ ಬರಲು ಸಾಧ್ಯವಾಗಿಲ್ಲ” ಎಂದು ಧ್ಯಾನ್ ಹೇಳಿದ್ದರು.

ಒಟ್ಟಾರೆಯಾಗಿ, ತ್ರಿಶಾ ಅವರ ವೈಯಕ್ತಿಕ ಜೀವನದ ಬಗ್ಗೆ ಪರಭಾಷಾ ನಟರು ಮಾಡುತ್ತಿರುವ ಇಂತಹ ಕಾಮೆಂಟ್‌ಗಳು ಈಗ ಕಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸುತ್ತಿವೆ.


Share with

Leave a Reply

Your email address will not be published. Required fields are marked *