ಸಿಯಾಚಿನ್, ನವೆಂಬರ್ 04: ಸಿಯಾಚಿನ್ನಲ್ಲಿ ಭಾರತೀಯ ಸೈನಿಕರು ಕಂದು ಹಿಮಕರಡಿಯನ್ನು ರಕ್ಷಿಸಿದ್ದಾರೆ. ದೊಡ್ಡ ಲೋಹದ ಬಾಕ್ಸ್ವೊಂದರಲ್ಲಿ ಕರಡಿಯ ಮುಖ ಸಿಲುಕಿತ್ತು. ಕರಡಿಯನ್ನು ರಕ್ಷಿಸಿರುವ ಸೈನಿಕರು ಡಬ್ಬಿಯಿಂದ ಮುಖ ಹೊರಗೆ ತೆಗೆದು ಬಳಿಕ ಅದೇ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ 2 ನಿಮಿಷಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರಕ್ಷಣೆ ಬಳಿಕ ಕರಡಿಗೆ ಶಕ್ತಿ ಬರಲೆಂದು ಅದಕ್ಕೆ ಆಹಾರವನ್ನು ನೀಡಲಾಯಿತು. ಬಳಿಕ ಮತ್ತೆ ಹಿಮಾಲಯದತ್ತ ಮುಖ ಮಾಡಿತ್ತು.





