ಪುತ್ತೂರು: ಮುಕ್ರಂಪಾಡಿಯಲ್ಲಿ ನಡೆದ ಒಮ್ಮಿ ಕಾರು ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೂಲತಃ ಕೆಮ್ಮಾಯಿ ಚಿಕ್ಕಮುಡ್ನೂರು ನಿವಾಸಿ, ಉಪ್ಪಳಿಗೆಯ ಅಜಲಡ್ಕದಲ್ಲಿ ವಾಸವಾಗಿರುವ ನಾರಾಯಣ್(29) ಎಂದು ತಿಳಿದು ಬಂದಿದೆ.
ಅಜಲಡ್ಕದ ತನ್ನ ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು, ಅಡಿಕೆ ತೆಗೆಯುವ, ಅಡಿಕೆಗೆ ಮದ್ದು ಬಿಡುವ ಕೆಲಸ ಮಾಡಿಕೊಂಡಿದ್ದರು.
ಆ. 13ರ ರಾತ್ರಿ ಮುಕ್ರಂಪಾಡಿಯಲ್ಲಿ ಬೈಕ್ ಮತ್ತು ಮಾರುತಿ ಒಮ್ಮೆ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ, ಎದುರು ಬಂದ ಒಮ್ಮಿ ಕಾರಿಗೆ ಬೈಕ್ ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನಾರಾಯಣ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದಿದ್ದು ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.