ಮಂಗಳೂರು ನಗರದಿಂದ ಕುಂಬಳೆಗೆ ಸೋಮಾವಾರ ಬೆಳಗ್ಗೆ ಹಣ್ಣುಗಳು ಹಾಗೂ ತರಕಾರಿ ತರುತ್ತಿದ್ದ ಪಿಕಪ್ ವಾಹನವೊಂದು ಶಿರಿಯಾ ಪೆಟ್ರೋಲ್ ಪಂಪ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದಿದೆ.
ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ತೊಕ್ಕೊಟ್ಟು ನಿವಾಸಿಗಳಾದ ಸಮದ್ (30) ಮತ್ತು ಆತಿಶ್ ( 25) ಗಾಯಗೊಂಡಿದ್ದಾರೆ. ಪ್ರಯಾಣ ಸಂದರ್ಭದಲ್ಲಿ ಪಿಕಪ್ ಟಯರ್ ಸ್ಫೋಟಗೊಂಡ ಕಾರಣ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ.




