ಮುಳಿಂಜ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭ

Share with

ಉಪ್ಪಳ: ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಗುರುವಾರ ಆರಂಭಗೊಂಡಿದ್ದು, ಈ ತಿಂಗಳ ೧೮ರ ತನಕ ನಡೆಯಲಿದೆ. ಬಲಿ ಉತ್ಸವ, ದ್ವಜಾರೋಹಣ ಸಹಿತ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ಆರಂಭಗೊAಡಿದೆ. ಇಂದು ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹವನ, ನವಕ ಕಲಶಾಭಿಷೇಕ, ಭಜನೆ ನಡೆಯಿತು. ಸಂಜೆ ೬.೩೦ರಿಂದ ಭಜನೆ, ರಾತ್ರಿ ೭ಕ್ಕೆ ಮಹಾಪೂಜೆ, ೮ರಿಂದ ದರ್ಶನ ಬಲಿ ಉತ್ಸವ, ರಾತ್ರಿ ೮.೩೦ರಿಂದ ಶ್ರೀ ಅಯ್ಯಪ್ಪ ಕೃಪಾ ಯಕ್ಷಗಾನ ಅಧ್ಯಯನ ಕೇಂದ್ರ ಬಾಳಿಯೂರು ಇದರ ಸ್ಥಳೀಯ ಪ್ರತಿಭೆಗಳಿಂದ ಸುದರ್ಶನ ವಿಜಯ, ನರಕಾಸುರ ವಧೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.


Share with

Leave a Reply

Your email address will not be published. Required fields are marked *