ಉಡುಪಿ: ಪೇಜಾವರ ಶ್ರೀಗಳ ರಾಮರಾಜ್ಯದ ಪರಿಕಲ್ಪನೆಯಂತೆ ಮನೆ ಕಟ್ಟಿಕೊಡುವ ಸಂಕಲ್ಪ; ಬಡವರ ಸೇವೆಯು ಶ್ರೀರಾಮನ ಸೇವೆ: ಪೇಜಾವರ ಶ್ರೀ

Share with

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ರಾಮ ರಾಜ್ಯದ ಪರಿಕಲ್ಪನೆಯಂತೆ ಉಡುಪಿಯ ಉದ್ಯಮಿ ರಾಜ್ ಗೋಪಾಲ್ ಭಟ್ ಅವರು ಬಡವರಿಗೆ ಮನೆ ಕಟ್ಟಿಕೊಡುವ ಸಂಕಲ್ಪ ಮಾಡಿದ್ದಾರೆ.

ಪೇಜಾವರ ಶ್ರೀಗಳ ರಾಮರಾಜ್ಯದ ಪರಿಕಲ್ಪನೆಯಂತೆ ಮನೆ ಕಟ್ಟಿಕೊಡುವ ಸಂಕಲ್ಪ

ಉಡುಪಿಯ ನಿಕಟಪೂರ್ವ ಶಾಸಕರಾದ ರಘುಪತಿ ಭಟ್‌ ಅಧ್ಯಕ್ಷತೆಯ ಆಸರೆ ಟ್ರಸ್ಟ್ ಮೂಲಕ ಆರ್ಥಿಕವಾಗಿ ಹಿಂದುಳಿದ ಅರ್ಹ ಗುಂಡಿಬೈಲು ಪಾಡಿಗಾರದ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಸಂಕಲ್ಪ ಮಾಡಿದ್ದಾರೆ.

ಮನೆ ಕಟ್ಟಿಕೊಡುವ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬಡವರಿಗೆ ಸೂರು ಕಲ್ಪಿಸುವ ಮೂಲಕ ಅಯೋಧ್ಯೆ ಶ್ರೀರಾಮಚಂದ್ರನಿಗೆ ಸೇವೆ ಸಲ್ಲಿಸಿದಂತಾಗುವುದು ಎಂದರು.

ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಮಾಜಿ ಶಾಸಕ ಕೆ ರಘುಪತಿ ಭಟ್, ಆಸರೆ ಚಾರಿಟೇಬಲ್ ಟ್ರಸ್ಟ್ ನ ಕೋಶಾಧಿಕಾರಿ ಸತೀಶ್ ಕುಲಾಲ್, ಸದಸ್ಯರಾದ ಸಂದೀಪ್ ಸನಿಲ್, ವಿದ್ಯಾ ಶ್ಯಾಮ್ ಸುಂದರ್, ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಸದಸ್ಯರಾದ ಸಂಧ್ಯಾ ರಮೇಶ್, ಸಂಧ್ಯಾ ಪ್ರಭು, ಸಂತೋಷ ಕಿಣಿ, ನಗರಸಭಾ ಸದಸ್ಯೆ ಗೀತಾ ಶೇಟ್, ಮುರಳಿಧರ್ ರಾವ್ ಗುಂಡಿಬೈಲು, ಮಂಜುನಾಥ್ ಹೆಬ್ಬಾರ್, ಭಾರತಿ ಚಂದ್ರಶೇಖರ್, ಸುಜಲ ಸತೀಶ್, ರಾಕೇಶ್ ಜೋಗಿ, ವಾಸುದೇವ ಭಟ್ ಪರಂಪಳ್ಳಿ ಉಪಸ್ಥಿತರಿದ್ದರು.

ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಈ ಮನೆಗೆ ಆರ್ಥಿಕ ಸಹಕಾರ ನೀಡಿದ ಲಕ್ಷ್ಮೀ ಇಲೆಕ್ಟ್ರಿಕಲ್ಸ್ ನ ಮಾಲೀಕರಾದ ರಾಜಗೋಪಾಲ ಆಚಾರ್ಯ ದಂಪತಿ ಇವರಿಗೆ ಸ್ವಾಮೀಜಿ ಸನ್ಮಾನಿಸಿದರು. ಮನೆಯ ಫಲಾನುಭವಿಯಾದ ಮಾಲಾಶ್ರೀ ಭಟ್ ಪಾಡಿಗಾರ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *